ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಕಳೆದ ಮಂಗಳವಾರ ಹಾಡುಹಗಲೇ ಕನ್ಹಯ್ಯಲಾಲ್ ಎಂಬ ದರ್ಜಿಯ ಕತ್ತು ಕತ್ತರಿಸಿ ಹತ್ಯೆ ಮಾಡಿ ಬಳಿಕ ವೀಡಿಯೊ ಅಪ್ಲೋಡ್ ಮಾಡಿದ ಇಬ್ಬರು ಮತಾಂಧ ಮುಸ್ಲಿಂ ಪಾತಕಿಗಳನ್ನು ರಾಷ್ಟ್ರೀಯ ತನಿಖಾ ವಶಕ್ಕೆ ತೆಗೆದುಕೊಂಡಿದೆ.
ಇಂದು ಬೆಳಗ್ಗೆ ಅಜ್ಮೇರ್ನಲ್ಲಿರುವ ಜೈಲಿಗೆ ತೆರಲಿದ ಎನ್ಐಎ ತಂಡ ಆರೋಪಿಗಳಾದ ಮುಹಮ್ಮದ್ ರಿಯಾಜ್ ಮತ್ತು ಗೌಸ್ ಮುಹಮ್ಮದ್ನನ್ನು ತನ್ನ ವಶಕ್ಕೆ ಪಡೆದುಕೊಂಡು ಭಾರಿ ಭದ್ರತೆಯಲ್ಲಿ ಜೈಪುರಕ್ಕೆ ಕರೆದುಕೊಂಡು ಹೋಗಿದೆ.
ಪಾಕಿಸ್ಥಾನದ ಉಗ್ರರಿಂದ ಬ್ರೈನ್ವಾಶ್
ಪಾಕಿಸ್ಥಾನದ ಉಗ್ರರ ಜತೆ ನಿರಂತರ ಸಂಪರ್ಕದಲ್ಲಿದ್ದ ಈ ಪಾತಕಿಗಳಿಗೆ ಅಲ್ಲಿಂದಲೇ ಬ್ರೈನ್ವಾಶ್ ಮಾಡಲಾಗಿತ್ತು ಎಂಬ ಅಂಶವನ್ನು ಗುಪ್ತಚರ ಪಡೆ ಪತ್ತೆಹಚ್ಚಿದೆ.
ಏನಾದರೂ ʼದೊಡ್ಡ ಕಾರ್ಯʼ ಮಾಡಿ ಎಂದು ಪಾಕಿಸ್ಥಾನದಲ್ಲಿರುವ ಅವರ ಸೂತ್ರಧಾರರು ಆರೋಪಿಗಳಿಗೆ ಪದೇ ಪದೆ ಹೇಳಿದ್ದರು. ಅದರಿಂದ ಪ್ರೇರಿತರಾಗಿ ಈ ಪಾತಕಿಗಳು ಹಾಡಹಗಲೇ ಕತ್ತು ಕತ್ತರಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.
ದೇಶದೊಳಕ್ಕೆ ಆರ್ಡಿಎಕ್ಸ್ ತಂದು ಸರಣಿ ಸ್ಫೋಟಗಳನ್ನು ನಡೆಸುವ ಸಂಚನ್ನು ಕೂಡ ಅವರು ಹಾಕಿದ್ದರು. ಆದರೆ ಬಿಗು ಭದ್ರತೆಯಿರುವ ಕಾರಣ ಾರ್ಡಿಎಕ್ಸ್ ಅನ್ನು ಗಡಿದಾಟಿ ತರುವುದು ಅವರಿಂದ ಸಾಧ್ಯವಾಗಿರಲಿಲ್ಲ.
ʼದೊಡ್ಡ ಕಾರ್ಯʼ ಮಾಡಲು ಉದಯಪುರ ಉಗ್ರರಿಗೆ ಪಾಕ್ ಪಾತಕಿಗಳ ಕುಮ್ಮಕ್ಕು
Recent Comments
ಕಗ್ಗದ ಸಂದೇಶ
on