Sunday, October 2, 2022
spot_img
Homeಸುದ್ದಿಸೋಮವಾರ ಏಕನಾಥ್‌ ಶಿಂಧೆಗೆ ಅಗ್ನಿ ಪರೀಕ್ಷೆ

ಸೋಮವಾರ ಏಕನಾಥ್‌ ಶಿಂಧೆಗೆ ಅಗ್ನಿ ಪರೀಕ್ಷೆ

ಮುಂಬಯಿ: ಶಿವಸೇನೆಯಿಂದ ಸಿಡಿದು ಹೋಗಿ ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿಯಾಗಿರುವ ಏಕನಾಥ ಶಿಂಧೆ ಸೋಮವಾರ ಬಹುಮತ ಸಾಬೀತುಪಡಿಸುವ ಅಗ್ನಿ ಪರೀಕ್ಷೆ ಎದುಸಬೇಕು. ಸದ್ಯದ ಲೆಕ್ಕಾಚಾರದ ಪ್ರಕಾರ ಶಿಂಧೆಗೆ ಬಹುಮತಕ್ಕೆ ಬೇಕಾಗುವಷ್ಟು ಸಂಖ್ಯಾಬಲ ಇದೆ. ಆದರೆ ಶನಿವಾರ ಮತ್ತು ಭಾನುವಾರ ವಿಶ್ವಾಸಮತ ಯಾಚನೆಯ ಸಲುವಾಗಿ ವಿಶೇಷ ಅಧಿವೇಶನ ನಡೆಯಲಿದೆ. ಅದರಲ್ಲಿ ಏನೆಲ್ಲ ಬದಲಾವಣೆಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಬಿಜೆಪಿ ಅತಿ ದೊಡ್ಡ ಪಕ್ಷವಾಗಿರುವುದರಿಂದ ಬಹುಮತ ಸಾಬೀತುಪಡಿಸಲು ಶಿಂಧೆ ಹೆಚ್ಚು ಕಸರತ್ತು ಮಾಡುವ ಅಗತ್ಯವಿಲ್ಲ.
ಬಿಜೆಪಿ ಶಾಸಕ ರಾಹುಲ್ ನರ್ವೇಕರ್ ವಿಧಾನಸಭಾ ಸ್ಪೀಕರ್ ಸ್ಥಾನಕ್ಕಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಒಂದು ವೇಳೆ ಈ ಸ್ಥಾನಕ್ಕೆ ಚುನಾವಣೆ ಅಗತ್ಯವಾದರೆ ಎರಡು ದಿನಗಳ ವಿಶೇಷ ಅಧಿವೆಶನದಲ್ಲಿ ಜುಲೈ 3 ರಂದು ಚುನಾವಣೆ ನಡೆಯಲಿದೆ.
ಕಾಂಗ್ರೆಸ್ ಪಕ್ಷದ ನಾನಾ ಪಟೋಲೆ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದಲೂ ಆ ಸ್ಥಾನ ತೆರವಾಗಿದೆ. ಜುಲೈ 4 ರಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸದನದಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ ಎಂದು ವಿಧಾನ ಭವನದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಶಿಂಧೆ ವಜಾ
ಈ ನಡುವೆ ಏಕನಾಥ ಶಿಂಧೆಯವರನ್ನು ಶಿವಸೇನೆಯ ಎಲ್ಲ ಹುದ್ದೆಗಳಿಂದ ಉದ್ಧವ್‌ ಠಾಕ್ರೆ ವಜಾಗೊಳಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಲಿಸಲಾಗಿದೆ ಎಂದು ಶಿವಸೇನೆ ಹೇಳಿಕೊಂಡಿದೆ. ಇದಕ್ಕೂ ಮೊದಲೇ ಶಿಂಧೆ ಶಿವಸೇನೆಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!