Homeಸ್ಥಳೀಯ ಸುದ್ದಿಆಲೂರು ಕರ್ನಾಟಕ ಏಕೀಕರಣದ ರೂವಾರಿ - ಡಾ. ಸತ್ಯನಾರಾಯಣ

Related Posts

ಆಲೂರು ಕರ್ನಾಟಕ ಏಕೀಕರಣದ ರೂವಾರಿ – ಡಾ. ಸತ್ಯನಾರಾಯಣ

ಕಾರ್ಕಳ : ಕನ್ನಡಿಗರ ಮನಸ್ಸನ್ನು ಒಗ್ಗೂಡಿ ಕರ್ನಾಟಕ ಏಕೀಕರಣದ ಭದ್ರ ಬುನಾದಿಯನ್ನು ಹಾಕಿದವರಲ್ಲಿ ಸಾಹಿತಿ ಆಲೂರು ವೆಂಕಟರಾವ್ ಪ್ರಮುಖರು.‌ ರಾಜ್ಯದಾದ್ಯಂತ ಸಂಚರಿಸಿ, ಜಾಗೃತಗೊಳಿಸಿ ನಾಡು ನುಡಿ ಸೇವೆಗೈದ ಆಲೂರು ಅವರನ್ನು ಸದಾ ಸ್ಮರಿಸುವ ಕಾರ್ಯವಾಗಬೇಕೆಂದು ಉಪನ್ಯಾಸಕ ಡಾ. ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಅವರು ಜು. 1ರಂದು ಕಾರ್ಕಳ ಹೊಟೇಲ್‌ ಪ್ರಕಾಶ್‌ನಲ್ಲಿ ಸಾಹಿತ್ಯ ಸಂಘದ ಬೆಳ್ಳಿಹಬ್ಬ ಸರಣಿ ಕಾರ್ಯಕ್ರಮದಲ್ಲಿ ಕನ್ನಡ ಕುಲ ಪುರೋಹಿತ ಹಾಗೂ ಕರ್ನಾಟಕ ಏಕೀಕರಣದ ರೂವಾರಿ ಆಲೂರು ವೆಂಕಟರಾಯರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಸಾಹಿತ್ಯ ಸಂಘದ ಕೋಶಾಧಿಕಾರಿ ನಿತ್ಯಾನಂದ ಪೈ, ಹೆಬ್ರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರೋ. ಪ್ರವೀಣ್‌, ನಿವೃತ್ತ ಏರ್‌ವೈಸ್‌ ಮಾರ್ಷಲ್‌ ರಮೇಶ್‌ ಕಾರ್ಣಿಕ್‌, ಆರತಿ ಪೈ ಉಪಸ್ಥಿತರಿದ್ದರು. ನಿವೃತ್ತ ಇಸ್ರೋ ವಿಜ್ಞಾನಿ ಜನಾರ್ಧನ ಇಡ್ಯ ಸ್ವಾಗತಿಸಿ, ಕೆ.ಕೆ. ನಂಬಿಯಾರ್‌ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೋ. ಪದ್ಮನಾಭ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here

Latest Posts

error: Content is protected !!