Homeಸ್ಥಳೀಯ ಸುದ್ದಿಉದ್ಯಮಿ ಮಹೇಶ್‌ ಶೆಟ್ಟಿ ಕುಡುಪುಲಾಜೆ ಭೇಟಿ ಮಾಡಿದ ಸಂಸದ ಪ್ರತಾಪ್‌ ಸಿಂಹ

Related Posts

ಉದ್ಯಮಿ ಮಹೇಶ್‌ ಶೆಟ್ಟಿ ಕುಡುಪುಲಾಜೆ ಭೇಟಿ ಮಾಡಿದ ಸಂಸದ ಪ್ರತಾಪ್‌ ಸಿಂಹ

ಮುಂಬೈ : ಹೊಟೇಲ್‌ ಉದ್ಯಮಿ, ನ್ಯೂಸ್‌ ಕಾರ್ಕಳ ಸಲಹಾ ಸಮಿತಿ ಸದಸ್ಯ ಮಹೇಶ್‌ ಶೆಟ್ಟಿ ಕುಡುಪುಲಾಜೆ ಅವರನ್ನು ಜು. 1ರಂದು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಮುಂಬೈಯಲ್ಲಿ ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದರು. ಮಹೇಶ್‌ ಶೆಟ್ಟಿ ಅವರ ಮುಂಬೈ ದೈಸರ್‌ ಪ್ರದೇಶದಲ್ಲಿರುವ ಮಹಾರಾಜ್‌ ಹೊಟೇಲ್‌ಗೆ ಶುಕ್ರವಾರ ಸಂಜೆ ಭೇಟಿ ನೀಡಿದರು. ಪ್ರತಾಪ್‌ ಸಿಂಹ ಅವರು ಮುಂಬೈಯ ತಾಜ್‌ ಹೊಟೇಲ್‌ನಿಂದ ರೈಲಿನ ಸಾಮಾನ್ಯ ಬೋಗಿಯಲ್ಲೇ ದೈಸರ್‌ಗೆ ಆಗಮಿಸಿರುವುದು ವಿಶೇಷವಾಗಿತ್ತು. ಅವರೊಂದಿಗೆ ಮೀರಾಬೈಂದಾರ್‌ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಂಟ್ವಾಳ ಮೂಲದ ಸಚ್ಚಿದಾನಂದ ಶೆಟ್ಟಿ ಉಪಸ್ಥಿತರಿದ್ದರು. ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಹೇಶ್‌ ಶೆಟ್ಟಿ ಅವರ ಕಾರ್ಯವನ್ನು ಸಂಸದರು ಮುಕ್ತ ಕಂಠದಿಂದ ಪ್ರಶಂಸಿಸಿದರು.

LEAVE A REPLY

Please enter your comment!
Please enter your name here

Latest Posts

error: Content is protected !!