Homeದೇಶನೂಪುರ್ ಬೆಂಬಲಿಸಿದ್ದಕ್ಕೆ ಅಮರಾವತಿಯಲ್ಲಿ ನಡೆದಿತ್ತು ಅಂಗಡಿ ಮಾಲೀಕನ ಕೊಲೆ

Related Posts

ನೂಪುರ್ ಬೆಂಬಲಿಸಿದ್ದಕ್ಕೆ ಅಮರಾವತಿಯಲ್ಲಿ ನಡೆದಿತ್ತು ಅಂಗಡಿ ಮಾಲೀಕನ ಕೊಲೆ

ಮಹಾರಾಷ್ಟ್ರ : ಉದಯ್‌ಪುರದಲ್ಲಿ ಟೈಲರ್ ಹತ್ಯೆಗೂ ಮುನ್ನ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಅಂಗಡಿ ಮಾಲೀಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಟೈಲರ್ ಕನ್ಹಯ್ಯಲಾಲ್‌ ಹತ್ಯೆಗೂ ಮುನ್ನ ಜೂ. 21 ರಂದು ಅಮರಾವತಿಯಲ್ಲಿ ಉಮೇಶ್ ಪ್ರಹ್ಲಾದ ರಾವ್ ಕೋಲ್ಹೆ ಅವರ ಕೊಲೆಯಾಗಿದೆ. ರಾಜಸ್ಥಾನ ಉದಯ್‌ಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಅವರ ಭೀಕರ ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಅಮರಾವತಿ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರು ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಹ್ಲಾದ್‌ ರಾವ್‌ ಅವರ ಮಗ ಸಂಕೇತ್ ಈ ಕುರಿತು ಅಮರಾವತಿಯ ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಆರೋಪಿಗಳಾದ ಮುದಸ್ಸಿರ್ ಅಹ್ಮದ್ ಮತ್ತು ಶಾರುಖ್ ಪಠಾಣ್ ಅವರನ್ನು ಜೂ. 23 ರಂದು ಬಂಧಿಸಲಾಗಿದೆ. ಈ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಕೊಲೆಯಲ್ಲಿ ಇನ್ನೂ ನಾಲ್ವರ ಕೈವಾಡವಿರುವುದು ಬಹಿರಂಗವಾಗಿದೆ. ಅವರಲ್ಲಿ ಮೂವರು ಆರೋಪಿಗಳಾದ ಅಬ್ದುಲ್ ತೌಫಿಕ್, ಶೋಯಬ್ ಖಾನ್, ಅತೀಬ್ ರಶೀದ್ ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

LEAVE A REPLY

Please enter your comment!
Please enter your name here

Latest Posts

error: Content is protected !!