ಕಾರ್ಕಳ : ಕಾಲು ಜಾರಿ ಹಳ್ಳಕ್ಕೆ ಬಿದ್ದು ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಜು. 2ರಂದು ಮುಂಡ್ಕೂರು ಗ್ರಾಮದ ಕುದುರೆಬೆಟ್ಟು ಎಂಬಲ್ಲಿ ಸಂಭವಿಸಿದೆ. ಸಚ್ಚರಿಪೇಟೆ ಚಾವಂಡಿಗುಡ್ಡೆಯ ನಿವಾಸಿ ನಾರಾಯಣ ಪೂಜಾರಿ (63) ಎಂಬವರೇ ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದ ದುರ್ದೈವಿ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
