ಕುಕ್ಕುಂದೂರು ಗ್ರಾ.ಪಂ.ನಲ್ಲಿ ಅರ್ಜಿ ಸ್ವೀಕಾರ


ಕಾರ್ಕಳ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರಕಾರದಿಂದ 75 ಯೂನಿಟ್‌ ಉಚಿತ ವಿದ್ಯುತ್‌ ಪೂರೈಸಲಾಗುತ್ತಿದ್ದು, ಕುಕ್ಕುಂದೂರು ಪಂಚಾಯತ್‌ನಲ್ಲಿ ಫಲಾನುಭವಿಗಳಿಂದ ಜು. 4ರಂದು ಅರ್ಜಿ ಸ್ವೀಕಾರ ಮಾಡಲಾಗುವುದು. ಅಂದು ಬೆಳಿಗ್ಗೆ 10 ಗಂಟೆಯಿಂದ ಅರ್ಜಿ ಪಡೆಯಲಾಗುವುದು. ಫಲಾನುಭವಿಗಳು ಬ್ಯಾಂಕ್‌ ಖಾತೆ ಪುಸ್ತಕದ ಮುಖಪುಟದ ಪ್ರತಿ, ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ವಿದ್ಯುತ್‌ ಬಿಲ್,‌ ಮೊಬೈಲ್‌ ನಂಬರ್‌, ಜಾತಿ ಪ್ರಮಾಣ ಪತ್ರದ ಪ್ರತಿಯೊಂದಿಗೆ ಒಂದು ಭಾವಚಿತ್ರ ನೀಡಬೇಕು. ದಾಖಲೆಗಳು ವಿದ್ಯುತ್‌ ಬಳಕೆದಾರರ ಹೆಸರಿನಲ್ಲಿರಬೇಕು ಎಂದು ಗ್ರಾ. ಪಂ. ಅಧ್ಯಕ್ಷೆ ಶಶಿಮಣಿ ಸಂಪತ್‌, ಪಿಡಿಒ ಪ್ರದೀಪ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top