ಬೈಲೂರಿನಲ್ಲಿ ಉಚಿತ ಹೃದಯರೋಗ ಮತ್ತು ಕಣ್ಣಿನ ಪೊರೆ ತಪಾಸಣೆ ಶಿಬಿರ
ಕಾರ್ಕಳ : ಬೈಲೂರಿನ ಕರಕರಿ ಫ್ರೆಂಡ್ಸ್ ಗ್ರೂಪ್ನ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬೈಲೂರು ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಬೆಳಿಗ್ಗೆ ಗಂಟೆ 9 ರಿಂದ 12 ರವರೆಗೆ ಉಚಿತ ಆರೋಗ್ಯ, ಹೃದಯರೋಗ ಮತ್ತು ಕಣ್ಣಿನ ತಪಾಸಣೆ ಶಿಬಿರ ನಡೆಯಲಿದೆ. ಕಾರ್ಕಳದ ಡಾ. ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯ ಡಾ. ಆನಂದ ನಾಯಕ್ ಇವರ ನೇತೃತ್ವದಲ್ಲಿ ಈ ಶಿಬಿರ ಜರುಗಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಸಂಜೆ 4.30 ರಿಂದ 5.30 ರವರೆಗೆ ಯುವ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು. ಬಳಿಕ ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ತಂಡದಿಂದ ಬಲೇ ತೆಲಿಪಾಲೆ ಹಾಸ್ಯ ಕಾರ್ಯಕ್ರಮ ಜರುಗುವುದು. ಸಂಜೆ 6 ರಿಂದ ಆರ್ಥಿಕ ನೆರವು ಮತ್ತು ಸನ್ಮಾನ ಕಾರ್ಯಕ್ರಮ ಮತ್ತು ನನ್ನಮ್ಮನ ಜೊತೆ ಒಂದು ಸೆಲ್ಫಿ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ, 6.30ರಿಂದ ಸಪ್ತಸ್ವರ ಮೆಲೋಡಿಸ್ ಉಮೇಶ್ ಕೋಟ್ಯಾನ್ ವಾಮದಪದವು ಬಳಗದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ.