ಎಜ್ಬಾಸ್ಟನ್ : ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಶನಿವಾರ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಎಸೆದಿದ್ದಾರೆ. ಭಾರತ ಆ ಒಂದು ಓವರಿನಲ್ಲಿ 35 ರನ್ ಗಳಿಸಿದೆ.
ಭಾರತದ ವಿರುದ್ಧ ಎಜ್ಬಾಸ್ಟಿನ್ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನ 84ನೇ ಓವರ್ನಲ್ಲಿ ಬ್ರಾಡ್ ಅತಿ ಹೆಚ್ಚು ರನ್ಗಳನ್ನು ನೀಡಿದರು.
ಈ ಓವರ್ನಲ್ಲಿ ಭಾರತದ ನಾಯಕ ಜಸ್ಟೀತ್ ಬೂಮ್ರಾ 29 ರನ್ ಗಳಿಸಿದರು. ಇದರಲ್ಲಿ ನಾಲ್ಕು ಬೌಂಡರಿಗಳು, ಎರಡು ಸಿಕ್ಸರ್ ಅಡಗಿದ್ದವು. ಇನ್ನುಳಿದ ರನ್ಗಳು ಎಕ್ಸ್ಟ್ರಾಗಳಿಂದ ಬಂದಿವೆ.
28 ರನ್ ನೀಡಿದ್ದು ಟೆಸ್ಟ್ ಇತಿಹಾಸದಲ್ಲಿನ ಈ ವರೆಗಿನ ದುಬಾರಿ ಓವರ್ ಆಗಿತ್ತು. 2003ರ ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ಜೋಹಾನ್ಸ್ ಬರ್ಗ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಬಿನ್ ಪೀಟರ್ಸನ್ ಅವರು 28ರನ್ ನೀಡಿದ್ದರು.
