Homeರಾಜ್ಯಪ್ರಮಾಣಪತ್ರ ಸಲ್ಲಿಕೆ ವಿಳಂಬ ಸೀಟು ನಿರಾಕರಣೆ : ದೈಹಿಕ ವಿಕಲಚೇತನ ವಿದ್ಯಾರ್ಥಿಯ ನೆರವಿಗೆ ಮುಂದಾದ ಕರ್ನಾಟಕ...

Related Posts

ಪ್ರಮಾಣಪತ್ರ ಸಲ್ಲಿಕೆ ವಿಳಂಬ ಸೀಟು ನಿರಾಕರಣೆ : ದೈಹಿಕ ವಿಕಲಚೇತನ ವಿದ್ಯಾರ್ಥಿಯ ನೆರವಿಗೆ ಮುಂದಾದ ಕರ್ನಾಟಕ ಹೈಕೋರ್ಟ್

ಬೆಂಗಳೂರು : ಅಂಗವೈಕಲ್ಯ ಪ್ರಮಾಣಪತ್ರ ಸಲ್ಲಿಕೆ ಮಾಡುವಲ್ಲಿ ವಿಳಂಬವಾದ ಕಾರಣ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಂಗವಿಕಲ ವಿದ್ಯಾರ್ಥಿಗೆ ಎಂಬಿಬಿಎಸ್ ಪದವಿಪೂರ್ವ ಕೋರ್ಸ್‌ನ ವೈದ್ಯಕೀಯ ಸೀಟ್ ನಿರಾಕರಿಸಿದ್ದು, ಇದೀಗ ವಿಶೇಷ ಚೇತನ ವಿದ್ಯಾರ್ಥಿಯ ನೆರವಿಗೆ ಕರ್ನಾಟಕ ಹೈಕೋರ್ಟ್ ಧಾವಿಸಿದೆ. ದೈಹಿಕ ವಿಕಲಚೇತನ ವಿದ್ಯಾರ್ಥಿನಿ ತಜೀನ್ ಇನಾಮದಾರ್ ಎಂಬುವವರು ಎಂಬಿಬಿಎಸ್ ಪದವಿಪೂರ್ವ ಕೋರ್ಸ್‌ನ ವೈದ್ಯಕೀಯ ಸೀಟ್ ಅನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು ತನ್ನ ಹೊಸ ಅಂಗವೈಕಲ್ಯ ಪ್ರಮಾಣಪತ್ರವನ್ನು ವ್ಯಾಟ್ಸಪ್‌ ಮೂಲಕ ಸಂಜೆ 5 ಗಂಟೆಯ ಮೊದಲು ಕಳುಹಿಸಿದ್ದರೂ, ಮೂಲ ದಾಖಲಾತಿ ಸಲ್ಲಿಕೆಯಲ್ಲಿ ಕೆಲವೇ ಸೆಕೆಂಡುಗಳಷ್ಟು ತಡವಾಗಿ ಸಲ್ಲಿಕೆ ಮಾಡಿದ್ದಕ್ಕಾಗಿ ಸೀಟು ರದ್ದುಗೊಳಿಸಿತ್ತು. ಇದೀಗ ಈ ವಿದ್ಯಾರ್ಥಿಯ ರಕ್ಷಣೆಗೆ ಕರ್ನಾಟಕ ಹೈಕೋರ್ಟ್ ಮುಂದಾಗಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!