Homeಸುದ್ದಿಇದು ದೇಶದ ಅತಿದೊಡ್ಡ ತೇಲುವ ಸೌರ ವಿದ್ಯುತ್‌ ಸ್ಥಾವರ

Related Posts

ಇದು ದೇಶದ ಅತಿದೊಡ್ಡ ತೇಲುವ ಸೌರ ವಿದ್ಯುತ್‌ ಸ್ಥಾವರ

ಹೈದರಾಬಾದ್‌: ಕಲ್ಲಿದ್ದಲು ಮತ್ತು ಜಲ ವಿದ್ಯುತ್‌ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈಗ ಸೌರ ವಿದ್ಯುತ್‌ ಉತ್ಪಾದನೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ. ಇದರಂಗವಾಗಿ ಭಾರತದ ಅತಿದೊಡ್ಡ ತೇಲುವ ಸೌರ ವಿದ್ಯುತ್ ಯೋಜನೆ ತೆಲಂಗಾಣ ರಾಜ್ಯದಲ್ಲಿ ಕಾರ್ಯಾರಂಭವಾಗಿದೆ. ರಾಮಗುಂಡಂನಲ್ಲಿರುವ ಇದು ಸುಮಾರು 100 ಮೆಗಾವ್ಯಾಟ್ ಸಾಮರ್ಥ್ಯದ ತೇಲುವ ಸೋಲಾರ್ ಪವರ್ ಪ್ರಾಜೆಕ್ಟ್. ಶುಕ್ರವಾರದಿಂದ ಕಾರ್ಯಾರಂಭ ಮಾಡಿದೆ.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಮಾರ್ಚ್‌ನಲ್ಲಿ ರಾಮಗುಂಡಂ ತೇಲುವ ಸೌರ ಯೋಜನೆಯಲ್ಲಿ ಹೆಚ್ಚುವರಿ 42.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ವಾಣಿಜ್ಯಿ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುವಂತೆ ಮಾಡಿತ್ತು.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ನ ಒಟ್ಟು ಉತ್ಪಾದನಾ ಸಾಮರ್ಥ್ಯ ಈಗ 69,134.20 ಮೆಗಾವ್ಯಾಟ್‌ ತಲುಪಿದೆ. ಇದರಲ್ಲಿ 23 ಕಲ್ಲಿದ್ದಲು ಆಧಾರಿತ, ಏಳು ಅನಿಲ ಆಧಾರಿತ, ಒಂದು ಜಲವಿದ್ಯುತ್ ಮತ್ತು 19 ನವೀಕರಿಸಬಹುದಾದ ಇಂಧನ ಯೋಜನೆಗಳಾಗಿವೆ. ಸಹಭಾಗಿತ್ವದ ಅಡಿಯಲ್ಲಿ, ಒಂಬತ್ತು ಕಲ್ಲಿದ್ದಲು ಆಧಾರಿತ, ನಾಲ್ಕು ಅನಿಲ ಆಧಾರಿತ, ಎಂಟು ಜಲ ಮತ್ತು ಐದು ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಹೊಂದಿದೆ.
ಕಳೆದ ಜೂನ್‌ನಲ್ಲಿ, ಎನ್‌ಟಿಪಿಸಿ 92 ಮೆಗಾವ್ಯಾಟ್ ಸಾಮರ್ಥ್ಯದ ತೇಲುವ ಸೋಲಾರ್‌ ವಿದ್ಯುತ್ ಯೋಜನೆಯನ್ನು ಕೇರಳದ ಕಾಯಂಕುಲಂನಲ್ಲಿ ಆರಂಭಿಸಿತ್ತು.ಅದಕ್ಕೂ ಮೊದಲು 2021ರ ಆಗಸ್ಟ್‌ನಲ್ಲಿ, ಆಂಧ್ರಪ್ರದೇಶದ ಸಿಂಹಾದ್ರಿಯಲ್ಲಿ ತೇಲುವ ಸೌರ ವಿದ್ಯುತ್‌ ಯೋಜನೆಯನ್ನು ಕಾರ್ಯಾರಂಭ ಮಾಡಲಾಯಿತು.

LEAVE A REPLY

Please enter your comment!
Please enter your name here

Latest Posts

error: Content is protected !!