Saturday, October 1, 2022
spot_img
Homeಸುದ್ದಿಭ್ರಷ್ಟ ಪೊಲೀಸ್‌ ಅಧಿಕಾರಿಗೆ ಬರೋಬ್ಬರಿ 1 ಕೋ.ರೂ. ದಂಡ

ಭ್ರಷ್ಟ ಪೊಲೀಸ್‌ ಅಧಿಕಾರಿಗೆ ಬರೋಬ್ಬರಿ 1 ಕೋ.ರೂ. ದಂಡ

ಬೆಂಗಳೂರು : ಭ್ರಷ್ಟ ಸರಕಾರಿ ನೌಕರರು ಲಂಚದ ಹಣಕ್ಕೆ ಕೈಚಾಚುವಾಗ ಎರಡೆರಡು ಬಾರಿ ಆಲೋಚಿಸಬೇಕಾದ ತೀರ್ಪೊಂದನ್ನು ಬೆಂಗಳೂರಿನ 78ನೇ ಸಿಸಿಎಚ್‌ ನ್ಯಾಯಾಲಯ ವಿಧಿಸಿದೆ. ಸರಕಾರಿ ನೌಕರಿಯಲ್ಲಿರುವಾಗ ಭ್ರಷ್ಟಾಚಾರ ಎಸಗಿ ಅಪಾರ ಅಕ್ರಮ ಸಂಪತ್ತು ಕೂಡಿ ಹಾಕಿದ್ದ ನಿವೃತ್ತ ಎಸ್‌ಪಿ ಸಿ.ಎ.ಶ್ರೀನಿವಾಸ್‌ ಎಂಬವರಿಗೆ ನ್ಯಾಯಾಲಯ 4 ವರ್ಷದ ಕಠಿಣ ಕಾರಾಗೃಹ ವಾಸ ಮತ್ತು 1 ಕೋ.ರೂ. ದಂಡ ವಿಧಿಸಿದೆ.


2007ರಲ್ಲಿ ಲೋಕಾಯುಕ್ತ ಪೊಲೀಸರ ಕೈಗೆ ಶ್ರೀನಿವಾಸ್‌ ಸಿಕ್ಕಿಬಿದ್ದಿದ್ದರು. ಆರೋಪಿ 1 ಕೋ.ರೂ.ದಂಡ ಪಾವತಿಸಲು ವಿಫಲಗೊಂಡರೆ ಹೆಚ್ಚುವರಿಯಾಗಿ ಮತ್ತೆ ಎರಡು ವರ್ಷ ಜೈಲು ವಾಸ ಅನುಭವಿಸಬೇಕು ಎಂದು ನ್ಯಾಯಾಧೀಶ ಎಸ್‌. ವಿ. ಶ್ರೀಕಾಂತ್‌ ಅವರು ತೀರ್ಪಿನಲ್ಲಿ ಹೇಳಿದ್ದಾರೆ.


ಡಿವೈಎಸ್‌ಪಿ ಆಗಿ 1973ರಲ್ಲಿ ಪೊಲೀಸ್‌ ಇಲಾಖೆಗೆ ಸೇರಿದ್ದ ಶ್ರೀನಿವಾಸ್‌ 2007ರಲ್ಲಿ ಯಲಹಂಕದ ಪೊಲೀಸ್‌ ತರಬೇತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದರು. ಅವರ ಅಕ್ರಮ ಆಸ್ತಿ ಸಂಪಾದನೆ ಮಾಹಿತಿ ಸಿಕ್ಕಿ ಲೋಕಾಯುಕ್ತ ದಾಳಿ ಮಾಡಿದಾಗ 40.60 ಲ.ರೂ. ಅಕ್ರಮ ಸಂಪತ್ತು ಪತ್ತೆಯಾಗಿತ್ತು. ನೌಕರಿಗೆ ಸೇರಿದಂದಿನಿಂದ ಅವರು ಒಟ್ಟು 1.16 ಕೋರೂ. ಆಸ್ತಿ ಸಂಪಾದನೆ ಮಾಡಿದ್ದರು. ಆದರೆ 75.77 ಲ.ರೂ.ಗೆ ಮಾತ್ರ ದಾಖಲೆ ಒದಗಿಸಲು ಸಾಧ್ಯವಾಗಿತ್ತು. ಉಳಿದ ಆಸ್ತಿಯನ್ನು ಅಕ್ರಮ ಎಂದು ಪರಿಗಣಿಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಈ ಪ್ರಕರಣದ ವಿಚಾರಣೆ 15 ವರ್ಷ ನಡೆದಿದೆ.

LEAVE A REPLY

Please enter your comment!
Please enter your name here

Most Popular

error: Content is protected !!