ಇಸ್ಲಾಮಾಬಾದ್: ದಿವಾಳಿಯಾಗಿರುವ ಪಾಕಿಸ್ಥಾನದಲ್ಲಿ ಈಗ ವಿದ್ಯುತ್ ಸಮಸ್ಯೆ ತೀರಾ ಹದಗೆಟ್ಟಿದೆ. ಅಲ್ಲಿ ಈಗ ಜನರಿಗೆ ಮೊಬೈಲ್ ರಿಚಾರ್ಜ್ ಮಾಡಿಕೊಳ್ಳಲು ಕೂಡ ಕರೆಂಟ್ ಇಲ್ಲದ ಪರಿಸ್ಥಿತಿ ಬಂದಿದೆ. ವಿದ್ಯುತ್ ಕೊರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪಾಕಿಸ್ಥಾನ ಸರಕಾರವೇ ಈಗ ಇಂಟರ್ನೆಟ್ ಸೇವೆಯನ್ನು ಬಂದ್ ಮಾಡುವುದಾಗಿ ಹೇಳಿದೆ. ದೀರ್ಘಾವಧಿಯ ತನಕ ಕರೆಂಟ್ ಇಲ್ಲದಿರುವುದರಿಂದ ಜನರು ಮೊಬೈಲ್ ಬಳಸಲು ಸಾಧ್ಯವಾಗದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊಬೈಲ್ ಸೇವಾದಾರ ಕಂಪನಿಗಳೀಗೂ ಒಇದರಿಂದ ಸಮಸ್ಯೆಯಾಗುತ್ತಿದ್ದು, ಅವುಗಳು ಸೇವೆ ರದ್ದುಪಡಿಸುವುದಾಗಿ ಎಚ್ಚರಿಸಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರವೇಈಗ ಭವಿಷ್ಯದಲ್ಲಿ ಇಂಟರ್ನೆಟ್ ಇಲ್ಲದ ದಿನಗಳಿಗೆ ತಯಾರಾಗಿ ಎಂದು ಜನರಿಗೆ ಹೇಳಿದೆ.
ಈ ತಿಂಗಳಿಂದ ಲೋಡ್ಶಡ್ಡಿಂಗ್ ಅವಧಿ ಇನ್ನೂ ಹೆಚ್ಚಾಗಲಿದೆ. ಜನರು ಇದಕ್ಕೆ ತಯಾರಾಗಿರಬೇಕೆಂದು ಸರಕಾರ ಹೇಳಿದೆ. ಈಗಾಗಲೇ ಪಾಕಿಸ್ಥಾನದಲ್ಲಿ 10-14 ತಾಸು ಲೋಡ್ಶೆಡ್ಡಿಂಗ್ ಇದೆ. ಮದುವೆ ಮತ್ತಿತರ ಸಮಾರಂಭಗಳನ್ನು ಹಗಲೇ ಮಾಡಿ ಮುಗಿಸಬೇಕೆಂದು ಸರಕಾರ ಆದೇಶಿಸಿದೆ. ಇದೀಗ ಜನರ ಅನಿವಾರ್ಯ ಸೇವೆಯಾಗಿರುವ ಇಂಟರ್ನೆಟ್ಗೂ ಸಂಚಕಾರ ಬರುವ ಸ್ಥಿತಿಗೆ ಬಂದು ತಲುಪಿದೆ
