Saturday, October 1, 2022
spot_img
Homeಸುದ್ದಿನೌಕರಿಯಿಂದ ಕಿತ್ತು ಹಾಕಿದರೆ ಎರಡು ದಿನದಲ್ಲಿ ಬಾಕಿ ಸೆಟಲ್‌ಮೆಂಟ್‌ ಆಗಬೇಕು

ನೌಕರಿಯಿಂದ ಕಿತ್ತು ಹಾಕಿದರೆ ಎರಡು ದಿನದಲ್ಲಿ ಬಾಕಿ ಸೆಟಲ್‌ಮೆಂಟ್‌ ಆಗಬೇಕು

*ನೂತನ ವೇಜ್‌ ಕೋಡ್‌ನಲ್ಲಿದೆ ಈ ನೌಕರ ಸ್ನೇಹಿ ನಿಯಮ
ಹೊಸದಿಲ್ಲಿ : ಉದ್ಯೋಗಿ ರಾಜೀನಾಮೆ ನೀಡಿದರೆ ಅಥವಾ ನೌಕರಿಯಿಂದ ಕಿತ್ತುಹಾಕಿದರೆ ಎರಡು ದಿನದೊಳಗೆ ಕಂಪನಿ ಆತನಿಗೆ ಕೊಡಬೇಕಿರುವ ಎಲ್ಲ ಮೊತ್ತವನ್ನು ನೀಡಿ ಅಂತಿಮ ಸೆಟಲ್‌ಮೆಂಟ್‌ ಮಾಡಬೇಕು. ನೂತನ ಕಾರ್ಮಿಕ ವೇತನ ಕಾಯಿದೆಯಲ್ಲಿ ನೌಕರರಿಗೆ ಅನುಕೂಲವಾಗುವ ಹೀಗೊಂದು ಅಂಶ ಇದೆ.
ಈಗ ಕಂಪನಿಗಳು ಉದ್ಯೋಗಿ ನೌಕರಿ ಬಿಟ್ಟ ಬಳಿಕ ಕೊನೆಯದಿನ ಕಳೆದು ವೇತನದ ಅಂತಿಮ ಚುಕ್ತ ಮಾಡಲು ಸುಮಾರು 2 ತಿಂಗಳು ತೆಗೆದುಕೊಳ್ಳುತ್ತವೆ. ಈಗಾಗಲೇಸಂಸತ್ತಿನ ಅಂಗೀಕಾರ ಪಡೆದಿರುವ ನಾಲ್ಕು ಕಾರ್ಮಿಕ ಕಾಯಿದೆಗಳು ವೇತನ, ಸಾಮಾಜಿಕ ಭದ್ರತೆಗಳು, ಕಾರ್ಮಿಕರೊಂದಿಗಿನ ಸಂಬಂಧ, ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಮೇಲೆ ವಿಶೇಷವಾಗಿ ಗಮನ ನೀಡಿದೆ.ಇದರಲ್ಲಿ ಕಾರ್ಮಿಕ ಸ್ನೇಹಿಯಾಗಿರುವ ಹಲವು ಅಂಶಗಳು ಇವೆ.
ನೂತನ ವೇಜ್‌ ಕೋಡ್‌ ಪ್ರಕಾರ ಉದ್ಯೋಗಿಯನ್ನು ಸೇವೆಯಿಂದ ವಜಾ ಗೊಳಿಸಿದರೆ ಅಥವಾ ಉದ್ಯೋಗ ಬಿಟ್ಟರೆ, ರಾಜೀನಾಮೆ ನೀಡಿದರೆ, ಕಂಪನಿಯು ಮುಚ್ಚಿದರೆ ಮುಂದಿನ ಎರಡು ದಿನಗಳೊಳಗೆ ಕಂಪನಿಯು ಅಂತಿಮ ಸೆಟಲ್‌ಮೆಂಟ್‌ ಮಾಡಬೇಕು.
ಕೇಂದ್ರ ಈ ಕಾನೂನನ್ನು ಜುಲೈ 1ರಿಂದಲೇ ಜಾರಿಗೆ ತರಲು ಉದ್ದೇಶಿಸಿದೆ. ಆದರೆ, ಕೆಲವೊಂದು ರಾಜ್ಯಗಳು ಅನುಷ್ಠಾನಿಸಲು ಇನ್ನಷ್ಟು ಸಮಯ ಕೇಳಿವೆ. ಹೊಸ ವೇತನ ಸಂಹಿತೆ ಅಥವಾ ಕೋಡ್‌ನಿಂದ ಕೆಲಸದ ಅವಧಿ, ಪಿಎಫ್‌ ಕೊಡುಗೆ ಹೆಚ್ಚಲಿದೆ. ಆದರೆ, ಇದರಿಂದ ಉದ್ಯೋಗಿಗಳ ಕೈಗೆ ದೊರಕುವ ವೇತನದ ಮೊತ್ತ ಕಡಿಮೆಯಾಗುತ್ತದೆ. ಕಂಪನಿಗಳು ತಮ್ಮ ಉದ್ಯೋಗದ ಸಮಯವನ್ನು 12 ಗಂಟೆಯವರೆಗೆ ಹೆಚ್ಚಿಸಬಹುದು. ಅಂತಹ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ರಜೆಯೂ ದೊರಕುತ್ತದೆ. ನೂತನ ವೇಜ್‌ ಕೋಡ್‌ ವಾರದಲ್ಲಿ ಒಟ್ಟು 48 ಗಂಟೆ ಕೆಲಸದ ಅವಧಿಯನ್ನು ಕಡ್ಡಾಯಗೊಳಿಸುತ್ತದೆ.

LEAVE A REPLY

Please enter your comment!
Please enter your name here

Most Popular

error: Content is protected !!