ಗ್ರಾಮಕರಣಿಕರಾದ ಮಹಮ್ಮದ್‌ ರಿಯಾಜ್‌, ತಾರೇಶ್‌ ಪ್ರಥಮ ದರ್ಜೆ ಸಹಾಯಕರಾಗಿ ಪದೋನ್ನತಿ

ಕಾರ್ಕಳ ಕಸಬಾ ಗ್ರಾಮಕರಣಿಕರಾಗಿ ಪ್ರವೀಣ್‌ ಕುಮಾರ್

ಕಾರ್ಕಳ : ಕಾರ್ಕಳ ಕಸಬಾ ಗ್ರಾಮದ ವಿಎ ಆಗಿದ್ದ ರಿಯಾಜ್‌ ಮಹಮ್ಮದ್‌ ತಾಲೂಕು ಕಚೇರಿ ಚುನಾವಣಾ ಶಾಖೆ ಪ್ರಥಮ ದರ್ಜೆ ಸಹಾಯಕರಾಗಿ ಹಾಗೂ ಎರ್ಲಪಾಡಿ ಗ್ರಾಮದ ವಿಎ ಆಗಿದ್ದ ತಾರೇಶ್‌ ಅವರು ತಾಲೂಕು ಕಚೇರಿ ಆಡಳಿತ ಶಾಖೆ ಪ್ರಥಮ ದರ್ಜೆ ಸಹಾಯಕರಾಗಿ ಪದನ್ನೋತಿ ಹೊಂದಿದ್ದಾರೆ. ರಿಯಾಜ್‌ ಅವರು ಈ ಹಿಂದೆ ಅಜೆಕಾರು, ಹಿರ್ಗಾನ, ಮರ್ಣೆಯಲ್ಲಿ ಗ್ರಾಮಕರಣಿಕರಾಗಿ, ಪ್ರಭಾರ ನೆಲೆಯಲ್ಲಿ ಕಂದಾಯ ನಿರೀಕ್ಷಕರಾಗಿ, ಕಳೆದ ಒಂದೂವರೆ ವರ್ಷಗಳಿಂದ ಕಾರ್ಕಳ ಕಸಬಾ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸಿದ್ದರು. ತಾರೇಶ್‌ ಅವರು ಮರ್ಣೆ, ಅಂಡಾರು, ಹೆರ್ಮುಂಡೆ, ಜಾರ್ಕಳ, ಎರ್ಲಪಾಡಿ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಪ್ರವೀಣ್‌ ಕಾರ್ಕಳ ವಿಎ

ಮಿಯ್ಯಾರು ಗ್ರಾಮಕರಣಿಕರಾಗಿರುವ ಪ್ರವೀಣ್‌ ಕುಮಾರ್‌ ಅವರು ಪ್ರಭಾರ ನೆಲೆಯಲ್ಲಿ ಕಾರ್ಕಳ ಕಸಬಾದ ಗ್ರಾಮಕರಣಿಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೂಲತಃ ಕಾಂತಾವರದವರಾಗಿರುವ ಪ್ರವೀಣ್‌ ಹೆರ್ಮುಂಡೆಯಲ್ಲಿ ವಿಎ ಕಾರ್ಯನಿರ್ವಹಿಸಿದ್ದರು.

error: Content is protected !!
Scroll to Top