Saturday, October 1, 2022
spot_img
Homeಸ್ಥಳೀಯ ಸುದ್ದಿಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ - ಪದಗ್ರಹಣ ಸಮಾರಂಭ

ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ – ಪದಗ್ರಹಣ ಸಮಾರಂಭ

ಕಾರ್ಕಳ : ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ ಪದಗ್ರಹಣ ಸಮಾರಂಭ ಹೊಟೇಲ್‌ ಕಟೀಲ್‌ ಇಂಟರ್‌ ನ್ಯಾಷನಲ್‌ನಲ್ಲಿ ಜೂ.29ರಂದು ನಡೆಯಿತು. ನೂತನ ಅಧ್ಯಕ್ಷ ಪ್ರವೀಣ್‌ ಸುವರ್ಣ, ಕಾರ್ಯದರ್ಶಿ ರಘುನಾಥ್ ಕೆ.ಎಸ್.,‌ ಕೋಶಾಧಿಕಾರಿ ಟಿ.ಕೆ. ರಘುವೀರ್‌ ಅವರಿಗೆ ನಿಕಟ ಪೂರ್ವ ಅಧ್ಯಕ್ಷೆ ಜ್ಯೋತಿ ರಮೇಶ್ ಅಧಿಕಾರ ಹಸ್ತಾಂತರಿಸಿದರು. ಮಾಜಿ ಲಯನ್ಸ್‌ ಗವರ್ನರ್‌ ಎನ್‌.ಎಂ. ಹೆಗ್ಡೆ ಪದಗ್ರಹಣ ನೆರವೇರಿಸಿದರು.‌

ಪುಸ್ತಕ ಬಿಡುಗಡೆ
ಅಧ್ಯಕ್ಷೆ ಜ್ಯೋತಿ ರಮೇಶ್‌ ಅವರ ಅವಧಿಯಲ್ಲಿ ಅ. 3 ರಿಂದ ಜೂ. 28 ವರೆಗೆ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಮಾಡಿರುವ ಸೇವಾ ಕಾರ್ಯಕ್ರಮದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಸನ್ಮಾನ
ಕರ್ನಾಟಕ ನಾಟಕ ಅಕಾಡೆಮಿಯ ನಾಟಕರಂಗ ಪ್ರಶಸ್ತಿಗೆ ಭಾಜನರಾಗಿರುವ ಚಂದ್ರಹಾಸ ಸುವರ್ಣ, ಅಂತರಾಷ್ಟ್ರೀಯ ಪವರ್‌ ಲಿಫ್ಟರ್ ಅಕ್ಷತಾ ಪೂಜಾರಿ ಬೋಳ, ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್‌ ಶೃತಿ ಅಂಚನ್‌‌, ಮಾಜಿ ಲಯನ್ಸ್‌ ಗವರ್ನರ್‌ ಎನ್.‌ ಎಂ. ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಶ್ರೀಸ್ತುತಿ ಪ್ರಾರ್ಥಿಸಿ, ವಿಜೇಶ್‌ ಶೆಟ್ಟಿ ಧ್ವಜವಂದನೆ ಮಾಡಿದರು. ಗೀತಾಚಂದ್ರ ಕಾರ್ಯಕ್ರಮ ನಿರೂಪಿಸಿ, ವನಿತಾ ವಿಶ್ವನಾಥ್‌ ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!