ಕಲ್ಲೊಟ್ಟೆ ಪೆರ್ವಾಜೆ ರಸ್ತೆ ದುರಸ್ತಿ

ನ್ಯೂಸ್‌ ಕಾರ್ಕಳ ವರದಿ ಫಲಶ್ರುತಿ

ಕಾರ್ಕಳ : ವಾರಾಹಿ ಪೈಪ್‌ಲೈನ್‌ ಕಾಮಗಾರಿಯಿಂದ ಹಾನಿಗೀಡಾಗಿದ್ದ ಪುರಸಭಾ ವ್ಯಾಪ್ತಿಯ ಕಲ್ಲೊಟ್ಟೆ-ಪೆರ್ವಾಜೆ ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ ದೊರೆತಿದೆ. ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಮುಖ್ಯಾಧಿಕಾರಿ ರೂಪ ಶೆಟ್ಟಿ, ಪುರಸಭಾ ಸದಸ್ಯೆ ಶಶಿಕಲಾ ಶೆಟ್ಟಿ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ವಿಪರೀತವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗೆ ಡಾಮರೀಕರಣ ಅಥವಾ ಕಾಂಕ್ರೀಟಿಕರಣ ಕಷ್ಟಸಾಧ್ಯ. ಹೀಗಾಗಿ ಕಲ್ಲಿನ ಹುಡಿಯನ್ನು ಹೊಂಡಗಳಿಗೆ ತುಂಬಿಸಿ, ನೀರು ನಿಲ್ಲದಂತೆ ತಾತ್ಕಾಲಿಕ ನೆಲೆಯಲ್ಲಿ ದುರಸ್ತಿಪಡಿಸಲಾಗುತ್ತಿದೆ. ಮಳೆ ಕಡಿಮೆಯಾದ ಬಳಿಕ ಕಾಂಕ್ರೀಟಿಕರಣವಾಗಲಿದೆ.

ಫಲಶ್ರುತಿ
ಕಲ್ಲೊಟ್ಟೆ-ಪೆರ್ವಾಜೆ ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ಕುರಿತು ನ್ಯೂಸ್‌ ಕಾರ್ಕಳ ವರದಿ ಪ್ರಕಟಿಸಿ, ಸಂಬಂಧಪಟ್ಟವರ ಗಮನ ಸೆಳೆಯಿತು. ಬಳಿಕ ಪುರಸಭಾ ಸಾಮಾನ್ಯ ಸಭೆಯಲ್ಲೂ ವಿಚಾರ ಪ್ರಸ್ತಾಪವಾಗಿ ಶೀಘ್ರ ದುರಸ್ತಿಪಡಿಸುವಂತೆ ಸದಸ್ಯರು ಆಗ್ರಹಿಸಿದ್ದರು.



































































































































































error: Content is protected !!
Scroll to Top