Friday, August 19, 2022
spot_img
Homeಅಂಕಣಆರೋಗ್ಯಧಾರ : ಆರೋಗ್ಯಕರ ಯಕೃತ್ತಿಗೆ ಹೀಗೆ ಮಾಡಿ

ಆರೋಗ್ಯಧಾರ : ಆರೋಗ್ಯಕರ ಯಕೃತ್ತಿಗೆ ಹೀಗೆ ಮಾಡಿ

ನಮ್ಮ ದೇಹದ ಅತಿ ಪ್ರಮುಖ ಅಂಗ ಯಕೃತ್. ದೇಹದಲ್ಲಿರುವ ಕಲ್ಮಶಗಳನ್ನು ಹೊರಗೆ ಹಾಕುವ ಕಾರ್ಯವನ್ನು ಮಾಡುತ್ತದೆ. ಆಹಾರವನ್ನು ಜೀರ್ಣಗೊಳಿಸುತ್ತದೆ. ಯಕೃತ್ತಿನ ಪ್ರಮುಖ ಕಾರ್ಯ ಕೊಬ್ಬನ್ನು ಕರಗಿಸುವುದು. ನಾವು ಆರೋಗ್ಯದಿಂದಿರಬೇಕಾದರೆ ಯಕೃತ್ತು ತನ್ನ ಕಾರ್ಯ ನಿರ್ವಹಿಸಬೇಕು. ಯಕೃತ್ತು ಸರಿಯಾಗಿ ಕೆಲಸ ಮಾಡದೆ ಇದ್ದರೆ ಅನೇಕ ಆರೋಗ್ಯ ಸಮಸ್ಯೆ ಕಾಡುವುದು. ಆದ್ದರಿಂದ ಯಕೃತ್ತನ್ನು ಆರೋಗ್ಯದಿಂದಿರಲು ಯತ್ನಿಸಬೇಕು.
ಯಕೃತ್ತು ಅನೇಕ ಕಾರಣಗಳಿಂದ ಹಾನಿಗೊಳಗಾಗುತ್ತದೆ. ಅಗ್ನಿಮಾಂದ್ಯ, ಅಧಿಕ ಕೊಬ್ಬಿನ ಆಹಾರ ಸೇವನೆ, ಅಧಿಕ ಔಷಧಿಗಳ ಬಳಕೆ, ಮದ್ಯಪಾನ, ರಿಫೈಂಡ್ ಆಯಿಲ್ ಬಳಸುವುದು, ಪ್ರಿಸರ್ವೇಟಿವ್ಸ್ ಹಾಕಿದ ಆಹಾರ, ಮಾಂಸಾಹಾರ, ಅನಿದ್ರಾ, ಸಿಗರೇಟ್ ಸೇದುವುದು, ಕರಿದ ಆಹಾರ, ಸಕ್ಕರೆಯ ಬಳಕೆ, ಪಿತ್ತ ವರ್ಧಕ ಆಹಾರ, ಖಾರ ಪದಾರ್ಥಗಳ ಸೇವನೆ. ಇವೆಲ್ಲವೂ ಯಕೃತ್ತನ್ನು ಹಾಳು ಮಾಡುತ್ತದೆ.
ಯಕೃತ್ತಿನ ಸಮಸ್ಯೆ ಇದ್ದಾಗ ತ್ವಚೆಯ ಮೇಲೆ ಕಪ್ಪುಕಲೆಗಳು, ಮುಖ ದುರ್ಗಂಧ, ಅರುಚಿ, ಕಾಲುಗಳಲ್ಲಿ ಊತ, ಜಾಂಡೀಸ್, ಫ್ಯಾಟಿಲಿವರ್, ಸ್ಕಿನ್ ಅಲರ್ಜಿ, ಗ್ಯಾಸ್ಟ್ರಿಕ್, ಹೊಟ್ಟೆ ನೋವು, ಅಜೀರ್ಣ ಕಾಣಿಸಿಕೊಳ್ಳುವುದು.

ಯಕೃತ್ತು ಆರೋಗ್ಯದಿಂದಿರಲು ಏನು ಮಾಡಬೇಕು
• ನಿದಾನ ಪರಿವರ್ಜನೆ ಅಂದರೆ ಯಕೃತ್ ಅನ್ನು ಹಾನಿ ಮಾಡುವ ಕಾರಣಗಳನ್ನು ದೂರ ಮಾಡುವುದು.
• ಬಿಸಿ ಸೂಪಾಚ್ಯ ಆಹಾರವನ್ನು ಸೇವಿಸಿ. ಅರಿಶಿನ, ಶುಂಠಿ, ದ್ರಾಕ್ಷಿ, ತೆಂಗಿನಕಾಯಿ, ನೆಲನೆಲ್ಲಿ, ಮೆಂತೆ, ಸೇಬು, ಬೀಟ್ ರೂಟ್, ಕ್ಯಾರೆಟ್, ಬೆಳ್ಳುಳ್ಳಿ, ಹಾಗಲ ಕಾಯಿ, ಬೇವು ಒಳ್ಳೆಯದು.
• ಕಬ್ಬು ಜ್ಯೂಸ್ ಯಕೃತ್ತಿಗೆ ಉತ್ತಮ. ಜ್ಯೂಸಿಗೆ ಶುಂಠಿ ಬೆರೆಸಿ ಕುಡಿದರೆ ಇನ್ನೂ ಒಳ್ಳೆಯದು.
• ರಾತ್ರಿ ಕಾಲು ಚಮಚ ಅರಶಿನ ಒಂದು ಕಪ್ ಬಿಸಿ ಹಾಲಿಗೆ ಹಾಕಿ ಕುಡಿಯಿರಿ ಅಥವಾ ಬೆಳಿಗ್ಗೆ ಕಾಲು ಚಮಚ ಅರಶಿನ ಜೇನುತುಪ್ಪದ ಜೊತೆ ಬೆರೆಸಿ ಸೇವಿಸಿ.
• ಊಟ ಸೇವಿಸುವ ಮುನ್ನ ಚಿಕ್ಕ ತುಂಡು ಹಸಿ ಶುಂಠಿ ಚಿಟಿಕೆ ಸೈಂಧವ ಲವಣದ ಜೊತೆ ಚಪ್ಪರಿಸಿ ತಿನ್ನಿ ನಂತರ ಊಟ ಮಾಡಿರಿ.
• ರಾತ್ರಿ ಮಲಗುವ ಮುಂಚೆ ಎರಡು ಎಸಳು ಬೆಳ್ಳುಳ್ಳಿಯನ್ನು ಸೇವಿಸಿ.
• ಕಟುಕಿ ಚೂರ್ಣ ಅರ್ಧ ಚಮಚ ಅರ್ಧ ಚಮಚ ಜೇನುತುಪ್ಪದ ಜೊತೆ ಸೇವಿಸಬಹುದು.
• ಭೃಂಗರಾಜಾಸವ ನಾಲ್ಕು ಚಮಚ, ನೀರು ನಾಲ್ಕು ಚಮಚ ಬೆರೆಸಿ ಊಟದ ಅರ್ಧ ಗಂಟೆಯ ನಂತರ ಸೇವಿಸಿ.
• ಭೂಮಿಯಾಮಲಕಿ ಸ್ವರಸ ಸೇವಿಸುವುದು ಯಕೃತ್ತಿಗೆ ಬಹಳ ಒಳ್ಳೆಯದು.
• ಅಲೋವೆರಾ ಜ್ಯೂಸ್ ಅಥವಾ ನೆಲ್ಲಿ ಜ್ಯೂಸ್ ಸೇವಿಸಿ.
• ದಿನಾಲು ಧ್ಯಾನ, ಪ್ರಾಣಾಯಾಮವನ್ನು ಮಾಡಿರಿ. ಸಂತೋಷದಿಂದಿರಿ.
• ಯೋಗಾಸನಗಳಲ್ಲಿ ಧನುರಾಸನ, ಭುಜಂಗಾಸನ, ಪಶ್ಚಿಮೋತ್ತಾಸನ, ಸೂರ್ಯ ನಮಸ್ಕಾರ, ಯೋಗ ಮುದ್ರಾ ಯಕೃತ್ತಿಗೆ ಒಳ್ಳೆಯದು.
• ದಿನಾಲೂ ಕನಿಷ್ಠ ಅರ್ಧ ಗಂಟೆ ನಡೆಯಿರಿ.
ಆರೋಗ್ಯ ನಿಮ್ಮ ಕೈಯಲ್ಲಿ ಇದೆ.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!