ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯದ ವಿಚಾರಣೆಯಿಂದ ಸದ್ಯ ತುಸು ರಿಲೀಫ್ ಸಿಕ್ಕಿದೆ. ಡಿಕೆಶಿ ಮತ್ತು ಇತರ ನಾಲ್ವರ ವಿರುದ್ಧ ಇರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜು.30ಕ್ಕೆ ಮುಂದೂಡಿದೆ.
ಡಿಕೆಶಿ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಇ.ಡಿ. ವಿಚಾರಣೆಯನ್ನು ಜು.30ರ ತನಕ ಮುಂದೂಡುವಂತೆ ಆದೇಶಿಸಿದೆ. ಜಾಮೀನು ಕೋರಿ ಡಿಕೆಶಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ಡಿಕೆಶಿ ವಿಚಾರಣೆ ಮಾಸಾಂತ್ಯಕ್ಕೆ ಮುಂದೂಡಿಕೆ
