Saturday, October 1, 2022
spot_img
Homeಸುದ್ದಿಲಕ್ಷ್ಮೀ ಜನಾರ್ದನ ಪಿಯು ಕಾಲೇಜಿನಲ್ಲಿ ಲೆಕ್ಕ ಪರಿಶೋಧಕರ ದಿನಾಚರಣೆ

ಲಕ್ಷ್ಮೀ ಜನಾರ್ದನ ಪಿಯು ಕಾಲೇಜಿನಲ್ಲಿ ಲೆಕ್ಕ ಪರಿಶೋಧಕರ ದಿನಾಚರಣೆ

ಬೆಳ್ಮಣ್: ಇಲ್ಲಿನ ಶ್ರೀ ಲಕ್ಷ್ಮೀ ಜನಾರ್ದನ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಿಂದ ರಾಷ್ಟ್ರೀಯ ಲೆಕ್ಕಪರೊಶೋಧಕರ ದಿನವನ್ನು (ನ್ಯಾಷನಲ್ ಚಾರ್ಟರ್ಡ್ ಅಕೌಂಟಂಟ್ಸ್‌ ಡೇ) ಆಚರಿಸಲಾಯಿತು.
ಹಳೆ ವಿದ್ಯಾರ್ಥಿನಿ, ಪ್ರಸ್ತುತ ಸಿಎ ವಿದ್ಯಾರ್ಥಿನಿ ಧನ್ಯ ಡಿ. ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ತನ್ನ ಸಿಎ ತರಗತಿಗಳ ಅನುಭವಗಳನ್ನು ಹಂಚಿಕೊಂಡರು.ಲೆಕ್ಕ ಪರಿಶೋಧಕರಾಗಬೇಕಿದ್ದರೆ ಪಿಯುಸಿಯಿಂದಲೇ ಹೇಗೆ ತಯಾರಿ ನಡೆಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಂಶುಪಾಲರು ಭುಜಂಗ ಪಿ. ಶೆಟ್ಟಿ ವಾಣಿಜ್ಯ ವಿಭಾಗದಲ್ಲಿರುವಂತಹ ವಿವಿಧ ಅವಕಾಶಗಳನ್ನು ವಿವರಿಸಿದರು.ಶ್ರೀಮಾ ಸ್ವಾಗತಿಸಿ, ಮಹಮ್ಮದ್ ರಬೀದ್ ವಂದಿಸಿದರು. ಮಹಮ್ಮದ್ ರಾಹಿಲ್ ಪ್ರಾಸ್ತಾವಿಕ ಮಾತನಾಡಿ, ನಿಭಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!