ಕಾರ್ಕಳ : ಬ್ರೈನ್ ಹ್ಯಾಮರೇಜ್ನಿಂದ ಸಾವಿಗೀಡಾದ ಕಾರ್ಕಳ ಕಾಬೆಟ್ಟು ಶಾಲಾ ಶಿಕ್ಷಕ ರಾಜೇಶ್ ಹೆಗ್ಡೆ ಅವರ ಕಣ್ಣುಗಳು ಮತ್ತು ಚರ್ಮವನ್ನು ದಾನ ಮಾಡಲು ಅವರ ಕುಟುಂಬದವರು ಒಪ್ಪಿಗೆ ನೀಡಿರುತ್ತಾರೆ. ಜೀವಿತ ಅವಧಿಯಲ್ಲಿ ರಾಜೇಶ್ ಅವರು ಆದರ್ಶ ಶಿಕ್ಷಕರಾಗಿ, ಸೇವಾ ಮನೋಭಾವ, ಪರೋಪಕಾರದ ಮೂಲಕವೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇದೀಗ ಸಾವಿನ ಅನಂತರ ಅಂಗಾಂಗ ದಾನ ಮಾಡುವ ಮೂಲಕ ಮತ್ತಷ್ಟು ಮಂದಿಯ ಬಾಳಿಗೆ ಬೆಳಕಾಗಲಿದ್ದಾರೆ. ರಾಜೇಶ್ ಅವರ ಅಂಗಾಂಗ ದಾನಕ್ಕೆ ಅವರ ಪತ್ನಿ ಜ್ಯೋತಿ, ಪುತ್ರರಾದ ಸೃಜನ್, ಶೋದನ್ ಒಪ್ಪಿಗೆ ನೀಡಿರುತ್ತಾರೆ.
