ಟ್ರಾಕ್ಟರ್‌ ಟ್ರೇಲರ್‌ನೊಳಗಿತ್ತು 40 ಶವ

ವಾಷಿಂಗ್ಟನ್‌: ಅಮೆರಿಕದ ಟೆಕ್ಸಾಸ್‌ ಪ್ರಾಂತ್ಯದ ಸ್ಯಾನ್ ಆಂಟೋನಿಯ ಎಂಬಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾದ ಟ್ರಾಕ್ಟರ್‌ಟ್ರೇಲರ್‌ ಒಂದರದಲ್ಲಿ 40 ಶವಗಳು ಸಿಕ್ಕಿವೆ. ಮೆಕ್ಸಿಕೊದಿಂದ ಅಮೆರಿಕಕ್ಕೆ ಅಕ್ರಮವಾಗಿ ನುಸುಳಿ ಬರಲು ಯತ್ನಿಸಿದವರ ಶವಗಳು ಇವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಾಕ್ಟರ್‌ಟ್ರೇಲರ್‌ನೊಳಗಡೆ ಜೀವಂತವಾಗಿದ್ದ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಮೆಕ್ಸಿಕೊದಿಂದ ಅಕ್ರಮ ನುಸುಳುವಿಕೆ ಮತ್ತೆ ಹೆಚ್ಚಿದೆ. ಜನರು ಹೀಗೆ ಉಸಿರುಕಟ್ಟಿಸುವ ವಾಹನಗಳಲ್ಲಿ ಅವಿತುಕೊಂಡು ಬರುತ್ತಿದ್ದಾರೆ. ಟ್ರಾಕ್ಟರ್‌ಟ್ರೇಲರ್‌ನಲ್ಲಿ ಹೀಗೆ ಬರುವಾಗ ಉಸಿರುಕಟ್ಟಿ ಜನರು ಸತ್ತಿರಬೇಕೆಂದು ಅಧಿಕಾರಿಗಳು ಹೇಳಿದ್ದಾರೆ. ಗಡಿ ಪ್ರವೇಶಿಸಿದ ಬಳಿಕ ಮುಂದುವರಿಯಲು ಸಾಧ್ಯವಾಗದೆ ಚಾಲಕ ವಾಹನವನ್ನು ಉಪೇಕ್ಷಿಸಿ ವಾಪಾಸು ಹೋಗಿರುವ ಸಾಧ್ಯತೆಯಿದೆ. ಅದರೊಳಗಿರುವವರು ಹೊರಗೆ ಬರಲು ಸಾಧ್ಯವಾಗದೆ ಉಸಿರುಕಟ್ಟಿ ಸತ್ತಿದ್ದಾರೆ ಎಂದು ತಿಳಿಸಿದ್ದಾರೆ. ಬದುಕಿದ್ದ 12 ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಸಂಭವಿಸಿರುವ ವಲಸಿಗರ ಅತಿ ದೊಡ್ಡ ದುರಂತವಿದು.





























































































































































































































error: Content is protected !!
Scroll to Top