ಬೆಂಗಳೂರು: ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಹಿಂದೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಚಾರವಾಗಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಕಂದಾಯ ಸಚಿವ ಅರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯದಿಂದ ತಮ್ಮ ಪಾಠಗಳನ್ನು ಕೈಬಿಡಬೇಕೆಂದು ಹಲವು ಸಾಹಿತಿಗಳು ಪತ್ರ ಬರೆದಿದ್ದಾರೆ. ಆದರೆ ಇಂಥ ಯಾವ ಪ್ರಕ್ರಿಯೆಯನ್ನು ಸರಕಾರ ನಡೆಸುವುದಿಲ್ಲ. ಪಠ್ಯ ಪುಸ್ತಕಗಳಲ್ಲಿ ಅವರೆಲ್ಲರ ಪಾಠಗಳು ಇರಲಿವೆ, ಹಿಂದೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಪರಿಷ್ಕರಣೆ ವೇಳೆ ಏಳೆಂಟು ಸಣ್ಣಪುಟ್ಟ ದೋಷಗಳು ಉಳಿದಿವೆ. ದೊಡ್ಡ ತಪ್ಪುಗಳು ಆಗಿಲ್ಲ. ಚಿಕ್ಕ ದೋಷಗಳನ್ನು ಸರಿಪಡಿಸಿ ಎರಡು ವಾರದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಗುವುದು ಎಂದಿದ್ದಾರೆ.
ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸಿದ್ಧಪಡಿಸಿದ ಪಠ್ಯಪುಸ್ತಕಗಳಲ್ಲಿ 150ಕ್ಕೂ ಹೆಚ್ಚು ದೋಷಗಳಿದ್ದವು. ಅವುಗಳನ್ನು ಸರಿಪಡಿಸುವ ಗೋಜಿಗೆ ಕೂಡ ಹೋಗಿರಲಿಲ್ಲ. ಹೆಚ್ಚುವರಿ ಪುಟಗಳನ್ನಷ್ಟೇ ಸೇರಿಸಿದ್ದರು ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಬರಗೂರು ಮೂಲಕ ಪಠ್ಯಪುಸ್ತಕಗಳಲ್ಲಿ ಕಮ್ಯುನಿಷ್ಟ್ ತತ್ವ ಸಿದ್ಧಾಂತಗಳನ್ನು ಹೇರಿದ್ದಾರೆ. ಹಿಂದು ಧರ್ಮ, ಹಿಂದೂ ಅಸ್ಮಿತೆಯ ಪದಗಳು, ರಾಮಾಯಣ, ಮಹಾಭಾರತ, ಈಶ್ವರ, ರಾಮ, ಕೃಷ್ಣ ಮತ್ತಿತರ ಅಂಶಗಳನ್ನು ಪಠ್ಯಪುಸ್ತಕಗಳಿಂದ ತೆಗೆಸಿದ್ದಾರೆ. ಟಿಪ್ಪು ಮತ್ತು ಮೊಗಲರನ್ನು ವೈಭವೀಕರಿಸುವುದು ಮತ್ತು ಹಿಂದು ರಾಜರು ಮತ್ತು ಅವರ ಸಾಧನೆಗಳನ್ನು ಕಡೆಗಣಿಸುವುದಷ್ಟೇ ಸಿದ್ದರಾಮಯ್ಯನವರ ಉದ್ದೇಶವಾಗಿತ್ತು ಎಂದು ಅರೋಪಿಸಿದ್ದಾರೆ.
ಪಠ್ಯಪುಸ್ತಕಗಳನ್ನು ಹಿಂದೆಗೆದುಕೊಳ್ಳುವುದಿಲ್ಲ: ಆರ್. ಅಶೋಕ್
Recent Comments
ಕಗ್ಗದ ಸಂದೇಶ
on