ಮುಂಬೈ: ಮಹಾರಾಷ್ಟ್ರದಲ್ಲಿ ಶುರುವಾಗಿರುವ ರಾಜಕೀಯ ಸಂಘರ್ಷ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಬಂಡೆದ್ದಿರುವವರನ್ನು ಹಣಿಯಲು ಮುಂದಾಗಿರುವ ಶಿವಸೇನೆ ಇದೀಗ ಅವರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗ ಮಾಡಿದೆ.
ಸಿಎಂ ಉದ್ಧವ್ ಠಾಕ್ರೆ ಬಣ ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಸೇರಿದಂತೆ 12 ಮಂದಿಯನ್ನು ಅನರ್ಹಗೊಳಸಲು ಮಹಾರಾಷ್ಟ್ರ ವಿಧಾನಸಭೆಯ ಉಪಸಭಾಪತಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಶಿವಸೇನೆ ಸಂಸದ ಅರವಿಂದ್ ಸಾವಂತ್ ಅವರು, ನಾವು ಡೆಪ್ಯೂಟಿ ಸ್ಪೀಕರ್ ಮುಂದೆ ಏಕನಾಥ್ ಶಿಂಧೆ ಸೇರಿದಂತೆ 12 ಶಾಸಕರು ನಿನ್ನೆಯ ಶಾಸಕಾಂಗ ಸಭೆಗೆ ಹಾಜರಾಗದ ಕಾರಣ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ.
ಸಭೆಗೂ ಮುನ್ನ ನೋಟಿಸ್ ನೀಡಲಾಗಿದ್ದು, ಸಭೆಗೆ ಹಾಜರಾಗದಿದ್ದರೆ ಸಂವಿಧಾನದ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಅದಾಗ್ಯೂ ಬಂಡಾಯ ಶಾಸಕರು ಹಾಜರಾಗಿಲ್ಲ. ಕೆಲವರು ಬರಲಿಲ್ಲ, ಇನ್ನು ಕೆಲವರು ಅನಗತ್ಯ ಕಾರಣಗಳನ್ನು ಕೊಟ್ಟಿದ್ದಾರೆ ಎಂದು ಸಾವಂತ್ ಹೇಳಿದ್ದಾರೆ.
ಅನರ್ಹತೆಗೆ ಪ್ರಸ್ತಾವನೆ ಸಲ್ಲಿಸಿರುವ 12 ಶಾಸಕರ ಪಟ್ಟಿಯಲ್ಲಿ ಏಕನಾಥ್ ಶಿಂಧೆ, ಪ್ರಕಾಶ್ ಸುರ್ವೆ, ತಾನಾಜಿ ಸಾವಂತ್, ಮಹೇಶ್ ಶಿಂಧೆ, ಅಬ್ದುಲ್ ಸತ್ತಾರ್, ಸಂದೀಪ್ ಭೂಮಾರೆ, ಭರತ್ ಗೊಗವಾಲೆ, ಸಂಜಯ್ ಶಿರ್ಸಾತ್, ಯಾಮಿನಿ ಯಾದವ್, ಅನಿಲ್ ಬಾಬರ್, ಬಾಲಾಜಿ ದೇವದಾಸ್ ಮತ್ತು ಲತಾ ಚೌಧರಿ ಅವರ ಹೆಸರುಗಳಿವೆ ಎಂದು ತಿಳಿದುಬಂದಿದೆ.
ಬಂಡಾಯ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ
Recent Comments
ಕಗ್ಗದ ಸಂದೇಶ
on