Wednesday, July 6, 2022
spot_img
Homeಸ್ಥಳೀಯ ಸುದ್ದಿಬೈಕ್‌ ಡಿವೈಡರ್‌ಗೆ ಗುದ್ದಿ ಸವಾರನಿಗೆ ಗಂಭೀರ ಗಾಯ

ಬೈಕ್‌ ಡಿವೈಡರ್‌ಗೆ ಗುದ್ದಿ ಸವಾರನಿಗೆ ಗಂಭೀರ ಗಾಯ

ಕಾರ್ಕಳ : ಬೋಳ ಗ್ರಾಮದ ವ್ಯಾಪ್ತಿಯಲ್ಲಿ ಕೆದಿಂಜೆಯ ಮಂಜರಪಲ್ಕೆಯಲ್ಲಿ ಕೆನರ ಬ್ಯಾಂಕ್‌ ಎದುರು ಜೂ.21ರಂದು ಮಧ್ಯಾಹ್ನ ಬೈಕ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಗುರುಪ್ರಸಾದ್‌ ಎಂಬವರು ಅತಿ ವೇಗದಿಂದ ಬೈಕ್‌ ಚಲಾಯಿಸಿಕೊಂಡು ಬರುವಾಗ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ಪಲ್ಟಿಯಾಗಿದೆ. ಗುರುಪ್ರಸಾದ್‌ ಅವರ ಎಡಗೈ ತುಂಡಾಗಿದ್ದು, ದೇಹದ ಒಳ ಭಾಗಕ್ಕೂ ಗಾಯಗಳಾಗಿವೆ. ಅವರನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!