Sunday, July 3, 2022
spot_img
Homeಸ್ಥಳೀಯ ಸುದ್ದಿಪತ್ರಕರ್ತ ಕೆ.ಎಂ. ಖಲೀಲ್‌ ಅವರಿಗೆ ಸಾಧನ ರತ್ನ ಪ್ರಶಸ್ತಿ

ಪತ್ರಕರ್ತ ಕೆ.ಎಂ. ಖಲೀಲ್‌ ಅವರಿಗೆ ಸಾಧನ ರತ್ನ ಪ್ರಶಸ್ತಿ

ಕಾರ್ಕಳ : ಕಿನ್ನಿಗೋಳಿಯ ಯುಗಪುರುಷ ಮತ್ತು ಕಥಾಬಿಂದು ಪ್ರಕಾಶನ ಮಂಗಳೂರು ಜಂಟಿಯಾಗಿ ಆಯೋಜಿಸಿರುವ ಕಾವ್ಯ ಸಂಭ್ರಮದಲ್ಲಿ ಕಾರ್ಕಳದ ಹಿರಿಯ ದೃಶ್ಯ ಮಾಧ್ಯಮ ಪ್ರತಿನಿಧಿ ಕೆ. ಎಂ. ಖಲೀಲ್ ಅವರಿಗೆ ಕರ್ನಾಟಕ ಸಾಧನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ತಿಳಿಸಿದ್ದಾರೆ.
ಜೂ. 25ರಂದು ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು. ಖಲೀಲ್ ಅವರು ಕಳೆದ 16 ವರ್ಷಗಳಿಂದ ಮಂಗಳೂರಿನ V4 ಚಾನಲ್‌ನಲ್ಲಿ ಕಾರ್ಕಳ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಕಳ ಅಂಚಿಕಟ್ಟೆ ಮಸೀದಿಯ ಅಧ್ಯಕ್ಷರಾಗಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!