ಕಾರ್ಕಳ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ನಡೆಸುವ 2021ರ ಸಾಲಿನ ರಾಷ್ಟ್ರಮಟ್ಟದ ಕೆವಿಪಿವೈ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಜ್ಞಾನಸುಧಾದ ಆರ್ಯ ಪಿ. ಶೆಟ್ಟಿ, ಪ್ರಜ್ವಲ್ ಪಟ್ಗಾರ್, ಅಖಿಲ್ ಯು. ವಾಗ್ಲೆ, ಆರ್ಯನ್ ವಿದ್ಯಾಧರ್ ಶೆಟ್ಟಿ, ಕಾರ್ತಿಕ್ ಬ್ಯಾಕುಡ್ ಜನರಲ್ ಮೆರಿಟ್ ನಲ್ಲಿ ರ್ಯಾಂಕ್ ಪಡೆದಿರುತ್ತಾರೆ.
ರಾಷ್ಟ್ರಮಟ್ಟದಲ್ಲಿ ಪ್ರತಿ ವರ್ಷ ಸುಮಾರು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಅದರಲ್ಲಿ ಈ ಬಾರಿ ಎಸ್ಎಕ್ಸ್ ವಿಭಾಗದಲ್ಲಿ ಕೇವಲ 1870 ವಿದ್ಯಾರ್ಥಿಗಳು ಅರ್ಹತೆ ಪಡೆದಿರುತ್ತಾರೆ. ಕಳೆದ ವರ್ಷವೂ ಉಡುಪಿ ಜಿಲ್ಲೆಯಿಂದ ಮೂವರು ವಿದ್ಯಾರ್ಥಿಗಳು ಕೆವಿಪಿವೈ – ಎಸ್ಎಕ್ಸ್ ತೇರ್ಗಡೆಯಾಗಿದ್ದು, ಅವರೆಲ್ಲ ಜ್ಞಾನಸುಧಾದ ವಿದ್ಯಾರ್ಥಿಗಳು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಜ್ಞಾನಸುಧಾದ ಐವರು ವಿದ್ಯಾರ್ಥಿಗಳಿಗೆ ಕೆವಿಪಿವೈ ರ್ಯಾಂಕ್
Recent Comments
ಕಗ್ಗದ ಸಂದೇಶ
on