ಹೆಬ್ರಿ : ಹೆಬ್ರಿ ತಾಲೂಕು ಹೆರ್ಗ ವಿಠಲ ಶೆಟ್ಟಿ ಸರಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಳೆದ 19 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ಮೂಡಬಿದ್ರಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿರುವ ನಿತ್ಯಾನಂದ ಶೆಟ್ಟಿ ಅವರಿಗೆ ಗುರುವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಚಿನ್ನದ ಉಂಗುರ, ಶಾಲು, ಮೈಸೂರು ಪೇಟ ಧರಿಸಿ ನಿತ್ಯಾನಂದ ಅವರನ್ನು ಗೌರವಿಸಲಾಯಿತು.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಭೂತಗುಂಡಿ ಕರುಣಾಕರ ಶೆಟ್ಟಿ, ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ. ಆಚಾರ್ಯ, ಎಸ್.ಡಿ.ಎಂ.ಸಿ. ಸದಸ್ಯರಾದ ಬಿ. ನಿತ್ಯಾನಂದ ಶೆಟ್ಟಿ, ಅನಂತಕೃಷ್ಣ ಭಟ್, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅವಿನಾಶ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಾಲಿನಿ, ಶಿಕ್ಷಕರಾದ ಮೋಹನ್ ಶೆಟ್ಟಿ, ಮಲ್ಲಿಕಾರ್ಜುನ, ರೀನಾ, ಶಿವಾನಂದ, ತುಳಸಿ, ಸಂಗೀತಾ, ಮೀನಾಕ್ಷಿ ನಿತ್ಯಾನಂದ ಶೆಟ್ಟಿ ಗುಣಗಾನ ಮಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಗಣೇಶ್ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಚ್ಚೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸತೀಶ್ ಪೂಜಾರಿ, ವಿಜಯ ಕುಲಾಲ್, ಸುಶೀಲಾ ನಾಯ್ಕ್, ಪೂರ್ಣಿಮಾ, ಪೋಷಕರಾದ ಜ್ಯೋತಿ, ಸುಧೀ, ಸುಮತಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸವಿತಾ, ರಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.
ಕ್ರೀಡಾ ಸಾಧಕರಿಗೆ ನಗದು ಪುರಸ್ಕಾರ
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಹೆರ್ಗ ಶಾಲಾ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡುವ ಸಲುವಾಗಿ ನಿತ್ಯಾನಂದ ಶೆಟ್ಟಿ ಅವರು 10 ಸಾವಿರ ರೂ. ಅನ್ನು ಶಾಲಾ ಖಾತೆಗೆ ಠೇವಣಿಯಿರಿಸುವುದಾಗಿ ತಿಳಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸ್ನೇಹಲತಾ ಟಿ.ಜಿ. ಸ್ವಾಗತಿಸಿದರು. ಪ್ರೌಢಶಾಲಾ ಶಿಕ್ಷಕಿ ತುಳಸಿ ಕಾರ್ಯಕ್ರಮ ನಿರೂಪಿಸಿ, ಶಿವಾನಂದ ಶೆಟ್ಟಿ ವಂದಿಸಿದರು.