Wednesday, July 6, 2022
spot_img
Homeಅಂಕಣಆರೋಗ್ಯಧಾರ - ಜ್ವರದ ಬಗ್ಗೆ ಇರಲಿ ಮುನ್ನೆಚ್ಚರಿಕೆ

ಆರೋಗ್ಯಧಾರ – ಜ್ವರದ ಬಗ್ಗೆ ಇರಲಿ ಮುನ್ನೆಚ್ಚರಿಕೆ

ಮಳೆಗಾಲದಲ್ಲಿ ಜ್ವರ ಬರುವುದು ಸಾಮಾನ್ಯ ವಿಷಯ. ದೇಹದ ತಾಪಮಾನ ಹೆಚ್ಚಾದರೆ ಅದನ್ನು ಜ್ವರ ಎಂದು ಕರೆಯುತ್ತಾರೆ. ಜ್ವರವು ಅನೇಕ ಕಾರಣಗಳಿಂದ ಬರಬಹುದು. ಸೋಂಕು (ಇನ್ಫೆಕ್ಷನ್), ವಾತಾವರಣದಲ್ಲಾಗುವ ಏರುಪೇರು, ಮತ್ತಿತರ ಕಾರಣಗಳಿಂದ ಇರಬಹುದು. ಜ್ವರವೊಂದು ಕಾಯಿಲೆ ಕೂಡ ಆಗಬಹುದು ಹಾಗೂ ಬೇರೆ ಕಾಯಿಲೆಗಳ ಲಕ್ಷಣ ಕೂಡ ಆಗಬಹುದು. ಜ್ವರದ ಮೂಲ ಕಾರಣವನ್ನು ಹುಡುಕಿ ಅದರ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ.

ಜ್ವರದ ಲಕ್ಷಣಗಳು

ಜ್ವರವು ಪಿತ್ತ ದೋಷದಿಂದ ಪ್ರಕಟವಾಗುವುದು. ದೇಹದಲ್ಲಿ ಹಾಗೂ ಮನಸ್ಸಿನಲ್ಲಿ ಸಂತಾಪ, ಆಹಾರ ರುಚಿಸದೆ ಇರುವುದು, ಬಾಯಾರಿಕೆಯಾಗುವುದು, ಕೆಲಸದಲ್ಲಿ ನಿರುತ್ಸಾಹ, ಹಸಿವಿಲ್ಲದಿರುವುದು, ಬಾಯಿ ಒಣಗುವಿಕೆ ಇವುಗಳು ಜ್ವರದ ಸಾಮಾನ್ಯ ಲಕ್ಷಣಗಳು.

ಆಯುರ್ವೇದದಲ್ಲಿ ಜ್ವರವನ್ನು ಅನೇಕ ರೀತಿಯಲ್ಲಿ ವಿಂಗಡಿಸಲಾಗಿದೆ

• ನಿಜ ಜ್ವರ (ದೋಷಗಳಿಂದ ಉತ್ಪತ್ತಿಯಾದ) ಹಾಗೂ ಆಗಂತುಕ ಜ್ವರ (ಹೊರಗಿನ ಕಾರಣಗಳಿಂದ).
• ಶಾರೀರಿಕ ಜ್ವರ ಹಾಗು ಮಾನಸಿಕ ಜ್ವರ.
• ಸಮ ವೇಗಿ (Continuous) ಮತ್ತು ವಿಷಮ ವೇಗಿ (Remittent fever).
• ಸಾಧ್ಯ ಜ್ವರ (ಔಷಧ ನೀಡಿ ಗುಣಪಡಿಸಲಾಗುವ ಜ್ವರ) ಮತ್ತು ಅಸಾಧ್ಯ ಜ್ವರ (ಗುಣಪಡಿಸಲಾಗದಂತಹ ಜ್ವರ)

ಜ್ವರವಿದ್ದಾಗ ಮನೆಯಲ್ಲಿ ಮಾಡಬೇಕಾದ ಕ್ರಮಗಳು ಹೀಗಿವೆ

• ಜ್ವರಕ್ಕೆ ಕಾರಣವಾಗುವ ಆಹಾರ, ಪಾನೀಯಗಳನ್ನು ಸೇವಿಸದರಿವುದು, ಪಿತ್ತ ವರ್ಧಕ ಆಹಾರ ಕಡಿಮೆ ಸೇವಿಸುವುದು.
• ದೇಹಕ್ಕೆ ವಿಶ್ರಾಂತಿ ನೀಡುವುದು.
• ಅಧಿಕ ಜ್ವರವಿದ್ದಾಗ ಒದ್ದೆ ಬಟ್ಟೆಯಿಂದ ಇಡೀ ದೇಹವನ್ನು ಒರೆಸಿ ಹಾಗೂ ಒದ್ದೆ ಬಟ್ಟೆಯನ್ನು ಹದಿನೈದು ಸೆಕೆಂಡ್ ಮೈಮೇಲೆ ಹಾಗೆಯೇ ಇಡಿ. ಹೀಗೆ ಹತ್ತು ನಿಮಿಷ ಮಾಡಿ. ಇದೇ ರೀತಿ ಒದ್ದೆ ಬಟ್ಟೆಯ ಪಟ್ಟಿಯನ್ನು ಮಾಡಿ ಹಣೆಗೆ ಕೂಡ ಇಡಿ. ಹೀಗೆ ಮಾಡುವುದರಿಂದ ಜ್ವರದ ತಾಪವನ್ನು ಶೀಘ್ರವಾಗಿ ಕಡಿಮೆ ಮಾಡಬಹುದು.

ಜ್ವರದ ಪಥ್ಯ

ಜ್ವರ ಬಂದಾಗ ಜೀರ್ಣ ಶಕ್ತಿ ಕುಂದುವುದರಿಂದ ಉಪವಾಸವು ಒಳ್ಳೆಯ ಪರಿಣಾಮ ಬೀರುವುದು. “ಲಂಘನಂ ಪರಮೌಷಧಮ್” ಎಂದು ಎಲ್ಲರೂ ಕೇಳಿರಬಹುದು. ಒಂದು ದಿನ ಉಪವಾಸ ಮಾಡುವುದು ಉತ್ತಮ ಔಷಧಿ. ಇದನ್ನು ಯುವಕರು ಮಾಡಬಹುದು. ಮಕ್ಕಳು, ವೃದ್ಧರು ಹಾಗೂ ಬೇರೆ ಕಾಯಿಲೆಗಳಿಂದ ಬಳಲುವವರು ಉಪವಾಸ ಮಾಡುವುದು ಬೇಡ. ಬಿಸಿಯಾದ ಬೇಗ ಜೀರ್ಣವಾಗುವಂಥ ಆಹಾರ ಸೇವಿಸಿ. ಸ್ವಲ್ಪ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿ. ಬಿಸಿನೀರು ಕುಡಿಯಿರಿ. ಹಳೆಯ ಅಕ್ಕಿ, ಹೆಸರುಬೇಳೆ, ಕಡ್ಲೆ ಬೇಳೆ, ಕಡ್ಲೆ ಕಾಳು, ಹೆಸರು ಕಾಳು, ಬಾರ್ಲಿ, ತರಕಾರಿ ಸೂಪ್, ಹಾಗಲಕಾಯಿ, ಶುಂಠಿಯನ್ನು ಸೇವಿಸಿ.

ಏನು ಮಾಡಬಾರದು?

  • ವ್ಯಾಯಾಮ, ಸ್ನಾನ, ಅಭ್ಯಂಗ, ಬೇಗ ಜೀರ್ಣವಾಗದ ಆಹಾರ ಸೇವನೆ ಮಾಡಬಾರದು.

ಆಯುರ್ವೇದ ಔಷಧಗಳು

ಸುದರ್ಶನ ಘನವಟಿ, ತ್ರಿಭುವನ ಕೀರ್ತಿ ರಸ, ಮೃತ್ಯುಂಜಯ ರಸ, ಶೃಂಗ ಭಸ್ಮ, ಗೋದಂತಿ ಭಸ್ಮ, ಅಮೃತ ಕಷಾಯ, ಜ್ವರ ಸಂಹಾರ ರಸ ಇತ್ಯಾದಿ.

ಡಾ. ಹರ್ಷಾ ಕಾಮತ್











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!