Wednesday, July 6, 2022
spot_img
Homeಸುದ್ದಿಕೊರೊನ ಲಸಿಕೆಯಿಂದ ಉಳಿಯಿತು 2 ಕೋಟಿ ಜೀವ

ಕೊರೊನ ಲಸಿಕೆಯಿಂದ ಉಳಿಯಿತು 2 ಕೋಟಿ ಜೀವ

ಹೊಸದಿಲ್ಲಿ: ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಕೊರೊನ ಸಾಂಕ್ರಾಮಿಕ ರೋಗದಿಂದ ಉಂಟಾದ ಕಷ್ಟನಷ್ಟಗಳು ಇನ್ನೂ ಪೂರ್ತಿಯಾಗಿ ಮರೆಯಾಗಿಲ್ಲ. ಆದರೂ ಕೊರೊನಕ್ಕೆ ಲಸಿಕೆ ಕಂಡುಹಿಡಿದ ಬಳಿಕ ಜನರಲ್ಲಿ ಈ ರೋಗ ಗೆಲ್ಲಬಹುದು ಎಂಬ ವಿಶ್ವಾಸವೊಂದು ಬಂದಿದೆ. ಇದಕ್ಕೆ ಇಂಬು ನೀಡುವಂತೆ ಇದೀಗ ಕೊರೊನ ಲಸಿಕೆಯೇ ಸುಮಾರು 2 ಕೋಟಿ ಜನರ ಪ್ರಾಣ ಉಳಿಸಲು ಕಾರಣವಾಯಿತು ಎಂಬ ಅಂಶವೊಂದು ಬೆಳಕಿಗೆ ಬಂದಿದೆ.
ದಿ ಲ್ಯಾನ್ಸೆಟ್‌ ಇನ್‌ಫೆಕ್ಷಿಯಸ್‌ ಡಿಸೀಸಸ್‌ ಎಂಬ ವೈದ್ಯಕೀಯ ವರದಿಯೊಂದರ ಪ್ರಕಾರ ಲಸಿಕೆ ಕಂಡುಹಿಡಿದ ಬಳಿಕ ಸುಮಾರು 2 ಕೋಟಿ ಜನರು ಕೊರೋನದಿಂದಾಗಿ ಸಾಯುವುದನ್ನು ತಡೆಯಲಾಗಿದೆ. ಲಸಿಕೆ ಅಪಾರ ಪ್ರಮಾಣದ ಸಾವನ್ನು ತಡೆಹಿಡಿದಿದೆ ಎಂದು ಈ ವರದಿ ಹೇಳಿದೆ.ಕೊರೋನ ಲಸಿಕೆ ಕಂಡು ಹಿಡಿದ ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿತ್ತು ಎನ್ನುವುದು ಗಮನಾರ್ಹ ಅಂಶ.
2020 ಡಿಸೆಂಬರ್‌ನಿಂದ 2021ರ ಡಿಸೆಂಬರ್‌ ನಡುವಿನ ಒಂದು ವರ್ಷದ ಅವಧಿಯಲ್ಲಿ 185 ದೇಶಗಳಲ್ಲಿ ಕೊರೊನ ಪರಿಣಾಮವನ್ನು ಅಧ್ಯಯನ ಮಾಡಿದಾಗ ಲಸಿಕೆಯಿಂದ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವ ಅಂಶ ತಿಳಿದುಬಂದಿದೆ.
ಲಸಿಕೆ ಕಂಡು ಹಿಡಿಯದಿರುತ್ತಿದ್ದರೆ ಜಗತ್ತಿನಾದ್ಯಂತ 3.4 ಕೋಟಿ ಜನರು ಸಾವಿಗೀಡಾಗುವ ಸಾಧ್ಯತೆಯಿತ್ತು. ಲಸಿಕೆ ನೀಡಲು ಶುರು ಮಾಡಿದ ಬಳಿಕ ಸಾವಿನ ಪ್ರಮಾಣದಲ್ಲಿ ಶೇ.63ರಷ್ಟು ಇಳಿಕೆಯಾಯಿತು ಎನ್ನುವುದನ್ನು ಅಧ್ಯಯನ ಕಂಡುಕೊಂಡಿದೆ.
ಕೊರೊನಕ್ಕೆ ಲಸಿಕೆ ಕಂಡು ಹಿಡಿದ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿತ್ತು. ಎಲ್ಲ ನಾಗರಿಕರಿಗೆ ಲಸಿಕೆಯನ್ನು ಉಚಿತವಾಗಿ ನೀಡಿದ್ದಲ್ಲದೆ, ಹಲವು ದೇಶಗಳಿಗೆ ರಫ್ತು ಕೂಡ ಮಾಡಲಾಗಿದೆ. ಕೊರೋನ ವಿರುದ್ಧ ಹೋರಾಟದಲ್ಲಿ ಭಾರತದ ಯೋಗದಾನ ದೊಡ್ಡದು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!