ಗಾಂಧಿನಗರ : ಗುಜರಾತ್ ನಲ್ಲಿ 2002ರಲ್ಲಿ ಸಂಭವಿಸಿದ ಕೋಮು ಗಲಭೆಗೆ ಸಂಬಂಧಿಸಿದಂತೆ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಕ್ಲೀನ್ಚಿಟ್ ನೀಡಿದೆ.
ಕಾಂಗ್ರೆಸ್ ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ವಿಧವೆ ಪತ್ನಿ ಜಾಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ. ಪ್ರಕರಣದಲ್ಲಿ ಪಿಎಂ ಮೋದಿ ಸೇರಿದಂತೆ ಹಲವರಿಗೆ ವಿಶೇಷ ತನಿಖಾ ತಂಡ ಈ ಹಿಂದೆ ಕ್ಲೀನ್ ಚಿಟ್ ನೀಡಿತ್ತು.
ಅದನ್ನು ಪ್ರಶ್ನಿಸಿ ಜಾಕಿಯಾ ಜಾಫ್ರಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅಲ್ಲಿ ಕೂಡ ದಾವೆ ನಿಲ್ಲಲಿಲ್ಲ. ಗುಜರಾತ್ ಗಲಭೆ ವಿಚಾರ ಹಿಡಿದುಕೊಂಡು ವಿಪಕ್ಷಗಳು ಮೋದಿ ಹೆಸರಿಗೆ ಮಸಿ ಬಳಿಯಲು ಸಾಕಷ್ಟು ಪ್ರಯತ್ನ ನಡೆಸಿದ್ದವು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮೋದಿಯನ್ನು ಸಿಲುಕಿಸಲು ಸರ್ವ ಪ್ರಯತ್ನ ಮಾಡಿತ್ತು. ಆದರೆ ಎಲ್ಲ ವಿಚಾರಣೆಗಳಲ್ಲಿ ಮೋದಿ ನಿರ್ದೋಷಿ ಎಂದು ಸಾಬೀತಾಗಿದ್ದಾರೆ.ಇದೀಗ ಸುಪ್ರೀಂ ಕೋರ್ಟ್ ಕೂಡ ಅವರು ನಿರ್ದೋಷಿ ಎಂದು ಸಾರಿದೆ.
ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿಗೆ ಸುಪ್ರೀಂ ಕ್ಲೀನ್ಚಿಟ್
Recent Comments
ಕಗ್ಗದ ಸಂದೇಶ
on