Tuesday, July 5, 2022
spot_img
Homeಸುದ್ದಿ60ನೇ ಹುಟ್ಟುಹಬ್ಬಕ್ಕೆ 60,000 ಕೋ.ರೂ. ದಾನ!

60ನೇ ಹುಟ್ಟುಹಬ್ಬಕ್ಕೆ 60,000 ಕೋ.ರೂ. ದಾನ!

ಹೊಸದಿಲ್ಲಿ: ಜನ ಸಾಮಾನ್ಯರಾದರೆ ಹುಟ್ಟುಹಬ್ಬದಂದು ಒಂದಷ್ಟು ಬಂಧುಬಳಗ ಸ್ನೇಹಿತರನ್ನು ಕರೆದು ಕೇಕ್‌ ಕತ್ತರಿಸಿ , ಭರ್ಜರಿ ಊಟ ಮಾಡಿ ಸಂಭ್ರಮಿಸಿಕೊಳ್ಳುತ್ತಾರೆ. ಸ್ವಲ್ಪ ಸಾಮಾಜಿಕ ಕಾಳಜಿಯಿರುವವರಾದರೆ ಅನಾಥಶ್ರಮಗಳಿಗೋ ಬಡವರಿಗೋ ಕೈಲಾದಷ್ಟು ದಾನ ಧರ್ಮ, ಸಹಾಯ ಮಾಡುತ್ತಾರೆ. ಇದು ಜನಸಾಮಾನ್ಯರ ಕತೆಯಾಯಿತು.
ಆದರೆ ಶ್ರೀಮಂತರ ಹುಟ್ಟಹಬ್ಬ ಇಷ್ಟೆಲ್ಲ ಸರಳವಾಗಿ ಮುಗಿಯುವುದಿಲ್ಲ.ಅಲ್ಲಿ ಏನಾದರೂ ವಿಶೇಷ ಇರಲೇಬೇಕು. ಇದೀಗ ಏಷ್ಯಾದ ನಂಬರ್‌ ಒನ್ ಶ್ರೀಮಂತ ಉದ್ಯಮಿ ಗೌತಮ್‌ ಅದಾನಿಯವರು ತನ್ನ ಹುಟ್ಟುಹಬ್ಬದಂಗವಾಗಿ ಒಂದಷ್ಟು ಮೊತ್ತವನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಅದು ಎಷ್ಟೆಂದರೆ ಬರೋಬ್ಬರಿ 60,000 ಕೋಟಿ ರೂಪಾಯಿ. ಅದಾನಿಯ 60ನೇ ಹುಟ್ಟುಹಬ್ಬದಂಗವಾಗಿ ಅವರ ಕುಟುಂಬ ಭರ್ತಿ 60 ಸಾವಿರ ಕೋಟಿ ರೂಪಾಯಿಯನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲು ತೀರ್ಮಾನಿಸಿದೆಯಂತೆ.
ಈ ಮೊತ್ತವನ್ನು ಆರೋಗ್ಯ ಸೇವೆ, ಶಿಕ್ಷಣ, ಕೌಶಲ ಅಭಿವೃದ್ಧಿ ಮುಂತಾದ ಜನರ ಒಳಿತಿಗೆ ಅವಕಾಶವಿರುವ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುವುದು. 60,000 ಕೋ.ರೂ. ಎಂದರೆ ಅದಾನಿಯವರ ಒಟ್ಟು ಸಂಪತ್ತಿನ ಶೇ.8ಕ್ಕಿಂತಲೂ ತುಸು ಹೆಚ್ಚೇ ಆಗುತ್ತದೆ. ಇದು ದೇಶದ ಕಾರ್ಪೋರೇಟ್‌ ಇತಿಹಾಸದಲ್ಲೇ ಅತಿ ದೊಡ್ಡ ದಾನ ಎಂಬ ಹಿರಿಮೆಗೆ ಪಾತ್ರವಾಗಲಿದೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!