ಇಸ್ಲಾಮಾಬಾದ್: ಪಾಕಿಸ್ಥಾನದ ಯುವ ಕ್ರಿಕೆಟಿಗನೊಬ್ಬ ತಂಟಕ್ಕೆ ಅಯ್ಕೆ ಆಗಲಿಲ್ಲ ಎಂದು ನಾಡಿ ಕತ್ತರಿಸಿಕೊಂಡು ಆತ್ನಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸಂಭವಿಸಿದೆ. ದಕ್ಷಿಣ ಸಿಂಧ್ ಪ್ರಾಂತ್ಯದ ಹೈದರಾಬಾದ್ನ ಯುವ ಕ್ರಿಕೆಟಿಗ ಶೋಯೆಬ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಇಂಟರ್-ಸಿಟಿ ಚಾಂಪಿಯನ್ಶಿಪ್ನಲ್ಲಿ ತಾನು ತವರು ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ. ಆಯ್ಕೆಗಾರರು ತನ್ನನ್ನು ಕೈಬಿಟ್ಟ ಕಾರಣ ನೊಂದು ಈ ಕೃತ್ಯವೆಸಗಿದ್ದಾನೆ.
ವೇಗದ ಬೌಲರ್ ಶೋಯೆಬ್ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದು, ಮಂಗಳವಾರ ಅವನ ಕುಟುಂಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಇಂಟರ್-ಸಿಟಿ ಚಾಂಪಿಯನ್ಶಿಪ್ಗಾಗಿ ಟ್ರಯಲ್ಸ್ ನಲ್ಲಿ ತನ್ನ ತರಬೇತುದಾರರಿಂದ ಆಯ್ಕೆಯಾಗದ ನಂತರ ಶೋಯೆಬ್ ದುಃಖಿತನಾಗಿದ್ದ.
ತಂಡಕ್ಕೆ ಆಯ್ಕೆಯಾಗಲಿಲ್ಲ ಎಂದು ಆತ್ನಹತ್ಯೆಗೆತ್ನಿಸಿದ ಕ್ರಿಕೆಟಿಗ
Recent Comments
ಕಗ್ಗದ ಸಂದೇಶ
on