ಮಂಗಳೂರು : ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಬಾವಿಗೆ ತಳ್ಳಿ ಬಳಿಕ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಸಂಭವಿಸಿದ್ದು, ಅವಘಡದಲ್ಲಿ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಹಿಳೆ ಮತ್ತು ಕೃತ್ಯ ಎಸಗಿದ ಆರೋಪಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಹಿತೇಶ್ ಶೆಟ್ಟಿಗಾರ್ ಎಂಬಾತ ಮೂವರು ಮಕ್ಕಳು ಶಾಲೆಯಿಂದ ಬಂದ ಬಳಿಕ ಬಾವಿಗೆ ತಳ್ಳಿದ್ದು ಬಳಿಕ ಪತ್ನಿ ಲಕ್ಷ್ಮೀ, ಮಕ್ಕಳ ಕುರಿತು ವಿಚಾರಿಸಿದಾಗ ಎಲ್ಲೋ ಅಡಗಿ ಕುಳಿತಿದ್ದಾರೆ ಎಂದು ಹೇಳಿರುತ್ತಾನೆ. ಮಕ್ಕಳನ್ನು ಹುಡುಕಾಡಿದಾಗ ಬಾವಿಗೆ ತಳ್ಳಿರುವುದು ಬೆಳಕಿಗೆ ಬಂದಿದೆ, ಹಿಂಬಾಲಿಸಿಕೊಂಡು ಬಂದ ಹಿತೇಶ್ ಪತ್ನಿ ಲಕ್ಷ್ಮೀ ಯನ್ನೂ ನೀನೂ ಸಾಯಿ ಎಂದು ಬಾವಿಗೆ ತಳ್ಳಿ, ಬಳಿಕ ತಾನೂ ಹಾರಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಅವರಿಬ್ಬರನ್ನು ಮೇಲಕೆತ್ತಿದಾರೆ. ಮಕ್ಕಳಾದ ರಶ್ಮಿತಾ(13), ಉದಯ (11)ಮತ್ತು ದಕ್ಷಿತ್(04) ಸಾವನ್ನಪ್ಪಿದ್ದಾರೆ.
