Wednesday, July 6, 2022
spot_img
Homeಸ್ಥಳೀಯ ಸುದ್ದಿಪಠ್ಯದ ಮೂಲಕ ಕೇಸರೀಕರಣಕ್ಕೆ ಸರಕಾರ ಮುಂದಾಗಿದೆ - ಬಿಪಿನ್‌ ಚಂದ್ರಪಾಲ್‌ ನಕ್ರೆ

ಪಠ್ಯದ ಮೂಲಕ ಕೇಸರೀಕರಣಕ್ಕೆ ಸರಕಾರ ಮುಂದಾಗಿದೆ – ಬಿಪಿನ್‌ ಚಂದ್ರಪಾಲ್‌ ನಕ್ರೆ

ಸೇನೆಗೆ ಪೂರ್ಣ ಪ್ರಮಾಣದ ನೇಮಕಾತಿ ನಡೆಸಬೇಕು- ಶೇಖರ್‌ ಮಡಿವಾಳ್‌

ಕೇಂದ್ರ ಸರಕಾರಕ್ಕೆ ಕನಿಷ್ಠ ಯೋಗ್ಯತೆಯೂ ಇಲ್ಲ – ಅಮೃತ್‌ ಶೆಣೈ

ಕಾರ್ಕಳ : ರೋಹಿತ್ ಚಕ್ರತೀರ್ಥ ಸಮಿತಿಯು ಪಠ್ಯಪರಿಷ್ಕರಣೆ ಮೂಲಕ ರಾಜ್ಯವನ್ನು ಕೇಸರೀಕರಣಗೊಳಿಸುವ ವ್ಯವಸ್ಥಿತ ಪಿತೂರಿ ನಡೆಸಿದೆ. ಪಠ್ಯ ಪರಷ್ಕರಣೆಗೆ ಬರಗೂರು ರಾಮಚಂದ್ರ ಸಮಿತಿ ಮರು ನೇಮಿಸಬೇಕು ಎಂದು ಕಾಂಗ್ರೆಸ್‌ ಉಡುಪಿ ಜಿಲ್ಲಾಧ್ಯಕ್ಷ ಬಿಪಿನ್‌ ಚಂದ್ರಪಾಲ್‌ ನಕ್ರೆ ಒತ್ತಾಯಿಸಿದರು.

ಅವರು ಬುಧವಾರ ಕಾರ್ಕಳ ಬಸ್‌ ನಿಲ್ದಾಣ ಬಳಿ ಪಠ್ಯ ಪುಸ್ತಕ ಪರಿಷ್ಕರಣೆ, ಗಾಂಧೀ ಕುಟುಂಬಕ್ಕೆ ಇಡಿ ಕಿರುಕುಳ, ಅಗ್ನಿ ಪಥ ಯೋಜನೆ ಜಾರಿಯನ್ನು ವಿರೋಧಿಸಿ ಕಾಂಗ್ರೆಸ್‌ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಹಿರಿಯ ನ್ಯಾಯವಾದಿ, ಕಾಂಗ್ರೆಸ್‌ ಮುಖಂಡ ಶೇಖರ ಮಡಿವಾಳ್ ಮಾತನಾಡಿ,‌ ಸೇನಾ ನೇಮಕಾತಿಯಲ್ಲಿ ಕೇಂದ್ರ ಸರಕಾರ ಅವೈಜ್ಞಾನಿಕ ನೀತಿ ರೂಪಿಸಿ, ಅಗ್ನಿಪಥ ಜಾರಿಗೆ ತರುತ್ತಿದೆ. ಈ ಯೋಜನೆಯನ್ನು ಕೂಡಲೇ ರದ್ದುಮಾಡಿ ಪೂರ್ಣಪ್ರಮಾಣದ ನೇಮಕಾತಿ ನಡೆಸಬೇಕು ಆಗ್ರಹಿಸಿದರು.

ಕನಿಷ್ಠ ಯೋಗ್ಯತೆಯೂ ಇಲ್ಲ
ಕಾಂಗ್ರೆಸ್‌ ಮುಖಂಡ ಅಮೃತ್ ಶೆಣೈ ಮಾತನಾಡಿ, ಗಾಂಧೀ ಕುಟುಂಬದ ಬಗ್ಗೆ ಮಾತನಾಡುವ ಕನಿಷ್ಟ ಯೋಗ್ಯತೆಯೂ ಇಲ್ಲದ ಮೋದಿ ಸರಕಾರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಭಯದಿಂದ ರಾಹುಲ್ ಗಾಂಧಿ ಅವರನ್ನು ತೇಜೋವಧೆ ಮಾಡಲು ಹೊರಟಿದೆ. ಇದಕ್ಕಾಗಿ ಇಡಿಯನ್ನು ಅಸ್ತ್ರವಾಗಿ ಬಳಸುತ್ತಿದೆ. ಇಂತಹ ಕುಟಿಲ ನೀತಿಯನ್ನು ಕಾಂಗ್ರೆಸ್ ಮೆಟ್ಟಿ ನಿಲ್ಲುವ ದಿನ ದೂರವಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಎನ್. ಕೋಟ್ಯಾನ್, ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ಬ್ಲಾಕ್ ಉಪಾಧ್ಯಕ್ಷ ರವಿಶಂಕರ್ ಶೇರಿಗಾರ್, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರಾ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಮಹಮ್ಮದ್, ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ ಇನ್ನಾ, ಪುರಸಭಾ ಸದಸ್ಯರಾದ ಅಶ್ಪಕ್ ಅಹ್ಮದ್, ಪ್ರತಿಮಾ, ಹರೀಶ್ ಕುಮಾರ್, ಮಾಜಿ ಪುರಸಭಾ ಅಧ್ಯಕ್ಷ ಸುಬಿತ್ ಕುಮಾರ್, ಮಾಜಿ ಸದಸ್ಯ ನವೀನ್ ದೇವಾಡಿಗ, ಶಿವಾಜಿ ರಾವ್, ಐಟಿ ಜಿಲ್ಲಾ ಕಾರ್ಯದರ್ಶಿ ಸತೀಶ, ಮಾಜಿ ಜಿ.ಪಂ. ಸದಸ್ಯ ಸುಪ್ರೀತ್ ಶೆಟ್ಟಿ, ಪಂಚಾಯತ್‌ ಸದಸ್ಯ ವಿಶ್ವನಾಥ ಭಂಡಾರಿ, ಅರಿಫ್ ಕಲ್ಲೋಟೆ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಶೋಭಾ, ಆಶಾ ಶೆಟ್ಟಿ, ವಿನ್ನಿ ಡಿʼಸೋಜಾ, ಸುನಿಲ್ ಭಂಡಾರಿ, ಹೇಮಂತ, ನಿಶಾನ್ ಶೆಟ್ಟಿ, ಸುಂದರ್ ಚಂದ್ರರಾಜ್, ಅಬ್ದುಲ್ ಸಾಣೂರು, ಅತಿಕಾರಿ ಪ್ರಕಾಶ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಕಾಂಗ್ರೆಸ್ ವಕ್ತಾರ ಶುಭದಾ ರಾವ್ ನಿರ್ವಹಿಸಿದರು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!