ಕಾರ್ಕಳ : ಬಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ “ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ” ಪಡೆದ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರನ್ನು ಜೂ.22 ರಂದು ಆಡಳಿತ ಮಂಡಳಿ ಸಭೆಯಲ್ಲಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು ಇತ್ತೀಚೆಗೆ ಪ್ರಾರಂಭವಾದ ಬಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಒಳ್ಳೆಯ ಪ್ರಗತಿ ಪತದಲ್ಲಿ ಸಾಗುತ್ತಿದೆ, ಇನ್ನು ಹೆಚ್ಚಿನ ಪ್ರಗತಿಗೆ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಇನ್ನು ಹೆಚ್ಚು ಸಹಕಾರ ನೀಡಿದಲ್ಲಿ ಪ್ರಥಮ ವರ್ಷದ ಅಂತ್ಯಕ್ಕೆ 10 ಕೋಟಿ ಠೇವಣಿ ಮತ್ತು 10 ಕೋಟಿ ಸಾಲದ ಗುರಿ ಮುಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.
ಉಪಾಧ್ಯಕ್ಷ ಕೆ. ಮಂಜುನಾಥ ಶೆಟ್ಟಿ ಬೈಲೂರು ಮಾತನಾಡಿ, ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲಿ, ಅಜಾತ ಶತ್ರುವಾಗಿ ಮಿಂಚುತ್ತಿರುವ ಯಶಸ್ವಿ ಉದ್ಯಮಿ, ಅಪ್ರತಿಮ ಸಂಘಟಕ ಮತ್ತು ನಿಸ್ವಾರ್ಥದಿಂದ ಬಡವರ ಸೇವೆಯಲ್ಲಿ ತೊಡಗಿರುವ ಮುನಿಯಾಲು ಉದಯ ಕುಮಾರ್ ಶೆಟ್ಟಿ ಇವರು ಈ ಪ್ರಶಸ್ತಿಗೆ ಆರ್ಹರು ಎಂದು ತಿಳಿಸಿದರು.
ಸಭೆಯಲ್ಲಿ ಸೊಸೈಟಿಯ ನಿರ್ದೇಶಕ ಕೆ. ನವೀನ ಚಂದ್ರ ಶೆಟ್ಟಿ ಕಾಬೆಟ್ಟು, ಸಚಿಂದ್ರ ಶೆಟ್ಟಿ ಜೋಡುರಸ್ತೆ ಕುಕ್ಕುಂದೂರು, ಪ್ರಶಾಂತ್ ಶೆಟ್ಟಿ ಕಾರ್ಕಳ, ಎಂ. ಪ್ರಸನ್ನ ಶೆಟ್ಟಿ ಕುಕ್ಕುಜೆ, ರಮೇಶ ಶೆಟ್ಟಿ ರೆಂಜಾಳ, ಪ್ರದೀಪ್ ಕುಮಾರ್ ಶೆಟ್ಟಿಇನ್ನಾ, ಮಾಲಿನಿ ಎನ್. ರೈ ಸಾಣೂರು, ಸುನಿತಾ ಎಸ್. ಶೆಟ್ಟಿ ಹಿರ್ಗಾನ, ವಿನಯಾ ಅರುಣ್ ಶೆಟ್ಟಿ, ಜೋಡುರಸ್ತೆ ಕುಕ್ಕುಂದೂರು ಹಾಗೂ ಮಹಾಪ್ರಬಂಧಕ ಕೃಷ್ಣ ಎಂ. ಶೆಟ್ಟಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಶೋರ್ ಶೆಟ್ಟಿ ಮತ್ತು ಸಿಬ್ಬಂದಿ ಪ್ರೀತಿ ಶೆಟ್ಟಿ ಉಪಸ್ಥಿತರಿದ್ದರು.