ಹೆಬ್ರಿ : ಅರುಣಾಚಲ ಪ್ರದೇಶದ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿಯೋಗವೊಂದು ಬುಧವಾರ ಹೆಬ್ರಿ ಗ್ರಾಮ ಪಂಚಾಯತ್ಗೆ ಭೇಟಿ ನೀಡಿದೆ. ಅಲ್ಲಿನ ಸ್ವಚ್ಛತೆ ಸಂಕೀರ್ಣ, ನರ್ಸರಿ ತೋಟ, ಜಲ ಜೀವನ್ ಮಿಷನ್ ಯೋಜನೆ ವೀಕ್ಷಿಸಿ, ಮಾಹಿತಿ ಪಡೆದುಕೊಂಡಿದೆ. ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ತಾ.ಪಂ. ಇಒ ಶಶಿಧರ ಕೆ.ಜಿ., ಮೈಸೂರು ಪಂಚಾಯತ್ ರಾಜ್ ಸಂಸ್ಥೆಯ ಎಸ್.ಎಚ್. ಪ್ರಕಾಶ್ ಜಿ., ಮಲ್ಲಿಕಾರ್ಜುನ ಸ್ವಾಮಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಭಿಯಂತರ ಸುರೇಂದ್ರನಾಥ್, ಪಿಡಿಒ ಸದಾಶಿವ ಸೇರ್ವೆಗಾರ್, ಪಂಚಾಯತ್ ಸದಸ್ಯರುಗಳಾದ ಸುಧಾಕರ್ ಹೆಗ್ಡೆ, ಜನಾರ್ದನ ಎಚ್., ಎಚ್.ಬಿ. ಸುರೇಶ್, ಕೃಷ್ಣ ನಾಯ್ಕ್, ತಾರನಾಥ ಬಂಗೇರ ಉಪಸ್ಥಿತರಿದ್ದರು. ಅರುಣಾಚಲ ತಂಡದ ಸದಸ್ಯರನ್ನು ತುಳುನಾಡಿನ ಮುಟ್ಟಾಳೆ ತೊಡಿಸಿ ಗೌರವಿಸಲಾಯಿತು.
Recent Comments
ಕಗ್ಗದ ಸಂದೇಶ
on