ಕಾರ್ಕಳ : ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇದರ ವತಿಯಿಂದ ಪತ್ತೊಂಜಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಸರಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇಲ್ಲಿನ ವೈದ್ಯ ಡಾ. ಶಶಾಂಕ್ ಆರ್. ಶೆಟ್ಟಿ ಕಟೀಲ್ ಮಾತನಾಡಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸರಕಾರದಿಂದ ದೊರೆಯುವ ಸೌಲಭ್ಯ ಕುರಿತು ಮಾಹಿತಿ ನೀಡಿದರು.
ಪುರಸಭಾ ಸದಸ್ಯೆ ಮಮತಾ ಪೂಜಾರಿ, ಎಸ್ವಿಟಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಹಿರಿಯ ಎಸ್ಟಿಆರ್ಸಿ ಸಂಯೋಜಕ ಶಿವಕುಮಾರ್, ಬಂಗ್ಲಗುಡ್ಡೆ ಸಮುದಾಯ ಆರೋಗ್ಯಾಧಿಕಾರಿ ಶ್ರೀನಿಧಿ, ಪತ್ತೊಂಜಿಕಟ್ಟೆ ಶಾಲೆಯ ಮುಖ್ಯಶಿಕ್ಷಕಿ ಶಾಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎನ್.ಸಿ.ಡಿ, ಆಪ್ತಸಮಾಲೋಚಕ ಕಿರಣ್ ಬಾಬು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದು. ಅಂಗನವಾಡಿ ಕಾರ್ಯಕರ್ತೆ ಗೀತಾ ವಂದಿಸಿದರು.
ಪತ್ತೊಂಜಿಕಟ್ಟೆಯಲ್ಲಿ ಉಚಿತ ವೈದ್ಯಕೀಯ ಶಿಬಿರ
Recent Comments
ಕಗ್ಗದ ಸಂದೇಶ
on