ಮುಂಬಯಿ: ಶಿವಸೇನೆಯ ಮತ್ತೆ ನಾಲ್ವರು ಶಾಸಕರ ಅಸ್ಸಾಂಗೆ ಹೋಗಿ ಏಕನಾಥ ಶಿಂಧೆ ಬಣ ಸೇರಿಕೊಳ್ಳುವುದರೊಂದಿಗೆ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ. ಬಹುತೇಕ ಸರಕಾರ ಪತನದ ಅಂಚಿಗೆ ಬಂದಂತಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿನ್ನೆಯೇ ಅಧಿಕೃತ ನಿವಾಸವನ್ನು ತೊರೆದಿರುವುದು ಮಹಾ ಸರಕಾರ ಪತನಗೊಳ್ಳುವ ಮುನ್ಸೂಚನೆ ಎಂದು ಭಾವಿಸಲಾಗಿದೆ.
ಅಸ್ಸಾಂನಲ್ಲಿರುವ ರಾಡಿಸನ್ ಬ್ಲೂ ಎಂಬ ಪಂಚತಾರಾ ಹೊಟೀಲಿನಲ್ಲಿ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ ಶಾಸಕರು ಬೀಡುಬಿಟ್ಟಿದ್ದಾರೆ. ಹೊಸದಾಗಿ ಅಸ್ಸಾಂಗೆ ಹೋದ ನಾಲ್ವರು ಶಾಸಕರನ್ನು ಶಿಂಧೆ ಸ್ವಾಗತಿಸಿರುವ ವೀಡಿಯೊ ಬಹಿರಂಗಗೊಂಡು ವೈರಲ್ ಆಗಿದೆ.ಬುಧವಾರ ತಡರಾತ್ರಿ ಇಬ್ಬರು ಶಾಸಕರು ಸೂರತ್ಗೆ ಹೋಗಿದ್ದರು. ಅವರು ಕೂಡ ಶೀಂಧೆ ಬಣ ಸೇರುವ ಉತ್ಸಾಹದಲ್ಲಿದ್ದಾರೆ ಎನ್ನಲಾಗಿದೆ.
ಸಿದ್ಧಾಂತದ ಜತೆ ರಾಜಿ ಮಾಡಿಕೊಂಡಿರುವ ಸರಕಾರದ ಜತೆಗಿರುವುದಿಲ್ಲ, ಸರಕಾರ ಉರುಳಿಸುತ್ತೇವೆ ಎಂದು ಶೀಂಧೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಉದ್ಧವ ಠಾಕ್ರೆ ರಾಜೀನಾಮಿ ನೀಡಿಲ್ಲ, ಆದರೆ ಅಧಿಕೃತ ನಿವಾಸ ತೊರೆದು ಬಾಂದ್ರದಲ್ಲಿರುವ ಮಾತೋಶ್ರೀ ಸೇರಿಕೊಂಡಿರುವುದು ಅವರ ಇನ್ನಿಂಗ್ಸ್ ಮುಗಿದಿರುವ ಸೂಚನೆ. ಬಹುತೇಕ ಇಂದು ಅವರು ರಾಜೀನಾಮಿ ಕೊಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮತ್ತೆ ನಾಲ್ವರು ಶಿವಸೇನೆ ಶಾಸಕರು ಶಿಂಧೆ ಬಣಕ್ಕೆ ಸೇರ್ಪಡೆ
Recent Comments
ಕಗ್ಗದ ಸಂದೇಶ
on