ಬೆಂಗಳೂರು: ರಾಜ್ಯದ ಅನುದಾನರಹಿತ ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶ ಶುಲ್ಕವನ್ನು ಶೇ.10 ಹೆಚ್ಚಿಸಲು ಸರಕಾರ ಅನುಮತಿ ನೀಡಿದೆ.
ಅನುದಾನರಹಿತ ಖಾಸಗಿ ಕಾಲೇಜುಗಳ ಒಕ್ಕೂಟದ ಬೇಡಿಕೆಯಂತೆ ಶುಲ್ಕ ಹೆಚ್ಚಳಕ್ಕೆ ಸರಕಾರ ಅನುಮತಿ ನೀಡಿದೆ. ಬುಧವಾರ ಒಕ್ಕೂಟದ ಪ್ರತಿನಿಧಿಗಳು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದರು. ಎರಡು ವರ್ಷ ಶುಲ್ಕ ಹೆಚ್ಚಳ ಮಾಡದಿರುವ ಕಾರಣ ಈ ವರ್ಷ ಶೇ.25 ಶುಲ್ಕ ಹೆಚ್ಚಿಸಬೇಕೆಂದು ಒಕ್ಕೂಟ ಬೇಡಿಕೆಯಿಟ್ಟಿತ್ತು. ಆದರೆ ಸರಕಾರ ಶೇ.10 ಹೆಚ್ಚಳಕ್ಕೆ ಮಾತ್ರ ಅನುಮತಿ ನೀಡಿದೆ.
ಶೇ.10 ಶುಲ್ಕಹೆಚ್ಚಳಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ನಿಗದಿತ ಶುಲ್ಕದ ಹೊರತಾಗಿ ಬೇರೆ ಯಾವುದೇ ರೀತಿಯ ಹಣಕ್ಕೆ ವಿದ್ಯಾರ್ಥಿಗಳಿಂದ ಬೇಡಿಕೆ ಇಡಬಾರದು ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಶೆ.10 ಹೆಚ್ಚಳಕ್ಕೆ ಅನುಮತಿ
Recent Comments
ಕಗ್ಗದ ಸಂದೇಶ
on