ಮಡಿಕೇರಿ: ಕೊಡಗು ಹಾಗೂ ಹಾಸನದ ಹಲವೆಡೆ ಗುರುವಾರ ನಸುಕಿನ ಹೊತ್ತು ಲಘು ಭೂಕಂಪ ಸಂಭವಿಸಿದೆ. ನಸುಕಿನ 4.30ರ ವೇಳೆಗೆ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಸೋಮವಾಋಪೇಟೆಯ ರೇಂಜರ್ ಬ್ಲಾಕ್ ವ್ಯಾಪ್ತಿಯ ಹಳ್ಳಿಗಳಲ್ಲಿ, ಮಡಿಕೇರಿ ತಾಲೂಕಿನ ದೇವಸ್ತೂರು ಸೇರಿ ಹಲವೆಡೆ ಭೂಕಂಪದ ಅನುಭವವಾಗಿದೆ ಎಂದು ಜನರು ಹೇಳಿಕೊಂಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ 3.4 ಕಂಪನ ತೀವ್ರತೆ ದಾಖಲಾಗಿದೆ. ಹೊಳೆನರಸೀಪುರದಿಂದ 16.ಕಿ.ಮೀ. ದಕ್ಷಿಣಕ್ಕೆ ಕಂಪನ ಕೇಂದ್ರವನ್ನು ಗುರುತಿಸಲಾಗಿದೆ.ಪಕ್ಕದ ಹಾಸನ ಜಿಲ್ಲೆಯಲ್ಲೂ ಕಂಪನ ಅನುಭವಕ್ಕೆ ಬಂದಿದೆ ಎಂದು ಜನರು ಹೇಳಿದ್ದಾರೆ. ಕಳೆದ ವರ್ಷವೂ ಕೊಡಗಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.
ಕೊಡಗಿನಲ್ಲಿ ಲಘು ಭೂಕಂಪ
Recent Comments
ಕಗ್ಗದ ಸಂದೇಶ
on