Wednesday, July 6, 2022
spot_img
Homeಸುದ್ದಿಹೆಬ್ರಿಯಲ್ಲಿ ಮನೆಯವರ ಎದುರೇ ತಲವಾರು ತೋರಿಸಿ ದನ ಎಳೆದೊಯ್ದ ದುಷ್ಕರ್ಮಿಗಳು

ಹೆಬ್ರಿಯಲ್ಲಿ ಮನೆಯವರ ಎದುರೇ ತಲವಾರು ತೋರಿಸಿ ದನ ಎಳೆದೊಯ್ದ ದುಷ್ಕರ್ಮಿಗಳು

ಹೆಬ್ರಿ: ಹೆಬ್ರಿಯ ಕಬ್ಬಿನಾಲೆ ಗ್ರಾಮದ ಬಾಲ್ಚಾರು ಎಂಬಲ್ಲಿ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಮನೆಯವರಿಗೆ ತಲವಾರು ತೋರಿಸಿ ಬೆದರಿಸಿ ಎರಡು ದನಗಳನ್ನು ಎಳೆದೊಯ್ದ ಘಟನೆ ಸಂಭವಿಸಿದೆ.
ರಾತ್ರಿ ದನಗಳು ಕೂಗುವುದನ್ನು ಕೇಳಿ ದಯಾಕರ ಗೌಡ (54) ಮತ್ತು ಅವರ ಅಳಿಯ ಪ್ರಸಾದ ಎದ್ದು ಕೊಟ್ಟಿಗೆಯ ಬಳಿ ಬಂದಾಗ ಒಂದು ಕಾರು ನಿಂತುಕೊಂಡಿತ್ತು. ಟಾರ್ಚ್‌ ಬಿಟ್ಟು ನೋಡಿದಾಗ ಮೂವರು ವ್ಯಕ್ತಿಗಳು ಕೊಟ್ಟಿಗೆಲ್ಲಿದ್ದ ಮೂರು ದನಗಳ ಪೈಕಿ ಎರಡನ್ನು ಬಿಚ್ಚಿಕೊಂಡು ಎಳೆದೊಯ್ಯುತ್ತಿರುವುದು ಕಂಡಿದೆ. ಪ್ರಸಾದ್‌ ಅವರು ಜೋರಾಗಿ ಬೊಬ್ಬೆ ಹಾಕಿ ದನಗಳನ್ನು ಬಿಡಿಸಿಕೊಳ್ಳಲು ಮುಂದಾದಾಗ ದುಷ್ಕರ್ಮಿಗಳು ಅವರಿಗೆ ತಲವಾರು ತೋರಿಸಿ ಮುಂದೆ ಬಂದರೆ ಕಡಿದು ಹಾಕುತ್ತೇವೆ ಎಂದು ಬೆದರಿಕೆಯೊಡ್ಡಿ ಅವರ ಕಣ್ಮುಂದೆಯೆ ಎರಡು ದನಗಳನ್ನು ಒರಟಾಗಿ ಕಾರಿಗೆ ತುಂಬಿಸಿಕೊಂಡು ಹೋಗಿದ್ದಾರೆ. ಪ್ರಸಾದ್‌ ಅವರು ಓಡಿಹೋಗಿ ಕಾರಿನ ನಂಬರ್‌ ಗುರುತಿಸಿದ್ದಾರೆ. KA 20 Z 6798 ನೋಂದಣಿಯ ಮಾರುತಿ ರಿಟ್ಜ್‌ ಕಾರು ಅದಾಗಿತ್ತು. ಎರಡು ದನಗಳ ಮೌಲ್ಯ ಸುಮಾರು 30,000 ರೂ. ಎಂದು ಅಂದಾಜಿಸಲಾಗಿದೆ.
ಕೆಲ ಸಮಯ ತಣ್ಣಗಾಗಿದ್ದ ದನ ಕಳ್ಳತನ ಪ್ರಕರಣಗಳು ಮರುಕಳಿಸಿರುವುದು ಹೈನುಗಾರರ ನಿದ್ದೆಗೆಡಿಸಿದೆ. ಅದರಲ್ಲೂ ಮನೆಯವರ ಕಣ್ಣೆದುರೇ ಯಾವುದೇ ಭಯವಿಲ್ಲದೆ ಬೆದರಿಸಿ ದನಗಳನ್ನು ಅಮಾನುಷವಾಗಿ ಹೊತ್ತುಕೊಂಡು ಹೋಗಿರುವುದು ಹೆಬ್ರಿ ಪರಿಸರದಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!