Tuesday, July 5, 2022
spot_img
Homeಸ್ಥಳೀಯ ಸುದ್ದಿಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ವಿವಿಧೆಡೆ ವಿಶ್ವಯೋಗ ದಿನಾಚರಣೆ

ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ವಿವಿಧೆಡೆ ವಿಶ್ವಯೋಗ ದಿನಾಚರಣೆ

ಕಾರ್ಕಳ : ಕುಕ್ಕುಂದೂರು ಮಹಾಶಕ್ತಕೇಂದ್ರದ ವತಿಯಿಂದ ನೆಲ್ಲಿಗುಡ್ಡೆ ಶ್ರೀ.ಧ.ಗ್ರಾ.ಯೋಜನೆಯ ಸಭಾಂಗಣದಲ್ಲಿ ಯುವಮೋರ್ಚಾ, ಮಹಿಳಾಮೋರ್ಚಾ ಮತ್ತು ಗ್ರಾಮ ಪಂಚಾಯತ್‌ ಇದರ ಜಂಟಿ ಆಶ್ರಯದಲ್ಲಿ ವಿಶ್ವಯೋಗ ದಿನವನ್ನು ಆಚರಿಸಲಾಯಿತು. ಯೋಗಗುರು ಅಶೋಕ್‌ ಯೋಗಾಸನದ ತರಬೇತಿ ನೀಡಿದರು. ಬಳಿಕ ಅವರಿಗೆ ಗೌರವ ಸಮರ್ಪಣೆ ನೆರವೇರಿಸಲಾಯಿತು. ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

ಮುಡಾರು

ಮುಡಾರು ಮಹಾಶಕ್ತಿಕೇಂದ್ರದ ಮಹಿಳಾಮೋರ್ಚಾದ ವತಿಯಿಂದ ಯೋಗದಿನವನ್ನು ಬಜಗೋಳಿ ಫಾರ್ಚುನ್‌ ಸೆಂಟರ್‌ನಲ್ಲಿ ಆಚರಿಸಲಾಯಿತು. ಗ್ರಾಮ ಸಮಿತಿ ಅಧ್ಯಕ್ಷೆ ವಿನಯಾ ರಾನಡೆ ಯೋಗದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಮಹಿಳಾ ಮೋರ್ಚಾದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

ಕಾರ್ಕಳ ನಗರ

ಕಾರ್ಕಳ ನಗರ ಶಕ್ತಿಕೇಂದ್ರದಿಂದ ವಿಶ್ವ ಯೋಗ ದಿನಾಚರಣೆಯನ್ನು ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು. ಪುರಸಭಾ ಸದಸ್ಯೆ ಭಾರತಿ ಅಮೀನ್‌ ಯೋಗದ ಮಹತ್ವವನ್ನು ತಿಳಿಸಿದರು. ಶಕ್ತಿಕೇಂದ್ರದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಕಳ ಎಸ್.ವಿ.ಟಿ ಮಹಿಳಾ ಕಾಲೇಜ್

ಕಾರ್ಕಳ ಎಸ್.ವಿ.ಟಿ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟ್ರೀಯ ಯೋಜನಾ ಘಟಕಗಳ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿನೀಯರು ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಪ್ರಾಂಶುಪಾಲರೊಡಗೂಡಿ ಯೋಗಾಸನವನ್ನು ಮಾಡಿದರು. ಯೋಗಾಸನದ ಮಹತ್ವದ ಬಗ್ಗೆ ಪ್ರಾಂಶುಪಾಲೆ ಉಷಾ ನಾಯಕ್‌ ತಿಳಿಸಿದರು.

ಕಾರ್ಕಳ ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜ್

ಕಾರ್ಕಳ ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌.ಎಸ್‌.ಎಸ್‌., ರೆಡ್‌ಕ್ರಾಸ್ ಘಟಕ ಮತ್ತು ಕ್ರೀಡಾ ವಿಭಾಗ ಇದರ ಜಂಟಿ ಆಶ್ರಯದಲ್ಲಿ ವಿಶ್ವಯೋಗ ದಿನವನ್ನು ಆಚರಿಸಲಾಯಿತು.ಯೋಗ ಶಿಕ್ಷಕಿ ನಾಝೀಯಾ ಯೋಗದಿಂದ ಆರೋಗ್ಯದಲ್ಲಿ ಆಗುವ ಪರಿಣಾಮಗಳ ಬಗ್ಗೆ ತಿಳಿಸಿ ಆಸನಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.‌

ಸಾಣೂರು

ಸಾಣೂರು ಗ್ರಾ. ಪಂ. ಸುವರ್ಣ ಗ್ರಾಮೋದಯ ಸೌಧದಲ್ಲಿ ಅಂತರಾಷ್ಟ್ರೀಯ ಯೋಗಾಚರಣೆಯನ್ನು ಆಚರಿಸಲಾಯಿತು. ಯೋಗಗುರು ಬಾಲಕೃಷ್ಣ ಯೋಗಾಸನದ ಮಾಹಿತಿ ನೀಡಿ ವಿವಿಧ ಆಸನಗಳನ್ನು ಕಲಿಸಿದರು. ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ ಮನಸ್ಸು, ದೇಹ ಮತ್ತು ಆತ್ಮ ಸೇರಿದಂತೆ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ ಎಂದರು.

ಬಜಗೋಳಿ ಸೇಕ್ರೆಡ್‌ ಹಾರ್ಟ್‌ ಆಂಗ್ಲ ಮಾಧ್ಯಮ ಶಾಲೆ

ಬಜಗೋಳಿ ಸೇಕ್ರೆಡ್‌ ಹಾರ್ಟ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿ ಅಂತರಾಷ್ಟ್ರೀಯ ಖ್ಯಾತಿಯ ಮಮತ ಗಣೇಶ್‌, ಮಕ್ಕಳಿಗೆ ಯೋಗ ದಿನಾಚರಣೆ ಮತ್ತು ಯೋಗದ ಮಾಹಿತಿ ನೀಡಿದರು.

ಬೆಳ್ಮಣ್‌ ಶ್ರೀ ಲಕ್ಷ್ಮೀ ಜನಾರ್ಧನ ಇಂಟರ್‌ ನ್ಯಾಶನಲ್ ಶಾಲೆ

ಬೆಳ್ಮಣ್‌ ಶ್ರೀ ಲಕ್ಷ್ಮೀ ಜನಾರ್ಧನ ಇಂಟರ್‌ ನ್ಯಾಶನಲ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಲಾಯಿತು. ಯೋಗ ಶಿಕ್ಷಕಿ ಮಧುಶ್ರೀ ದೀಪ ಬೆಳಗಿಸಿ ಉದ್ಘಾಟಿಸಿದರು. ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಸಂಸ್ಥೆಯ ಪ್ರಾಂಶುಪಾಲ ಮತ್ತು ಇತರ ಶಿಕ್ಷಕರು ಭಾಗವಹಿಸಿದ್ದರು.

ಬಜಗೋಳಿ ಸ.ಮಾ.ಹಿ.ಪ್ರಾಥಮಿಕ ಶಾಲೆ

ಬಜಗೋಳಿ ಸ.ಮಾ.ಹಿ.ಪ್ರಾಥಮಿಕ ಶಾಲೆಯಲ್ಲಿ 8ನೇ ವರ್ಷದ ಯೋಗ ದಿನವನ್ನು ಆಚರಿಸಲಾಯಿತು. ಮುಡಾರು ಗ್ರಾ. ಪಂ. ಸದಸ್ಯೆ ಶೃತಿ ಜೈನ್‌ ಕಾರ್ಯಕ್ರಮ ಉದ್ಘಾಟಿಸಿದರು. ಯೋಗ ಶಿಕ್ಷಕ ಕೃಷ್ಣದಾಸ್‌ ಪ್ರಭು ವಿದ್ಯಾರ್ಥಿಗಳಿಗೆ ಯೋಗಾಸನದ ತರಬೇತಿ ನೀಡಿದರು.

ಶಿರ್ಲಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಶಿರ್ಲಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂಡಿಯಲ್ಲಿ ವಿಶ್ವಯೋಗ ದಿನವನ್ನು ಆಚರಣೆ ಮಾಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಸತ್ಯನಾರಾಯಣ್‌ ನಾಯಕ್‌ ಅಧ್ಯಕತೆ ವಹಿಸಿದ್ದರು. ಯೋಗಗುರುಗಳಿಂದ ವಿದ್ಯಾರ್ಥಿಗಳಿಗೆ ಯೋಗದ ತರಬೇತಿಯನ್ನ ನೀಡಲಾಯಿತು. ಬಳಿಕ ದಾನಿಗಳಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

ಹೆಬ್ರಿ ಮುಳ್ಕಾಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ

ಹೆಬ್ರಿ ಮುಳ್ಕಾಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಯೋಗ ದಿನದ ಅಂಗವಾಗಿ ಯೋಗಾಸನ ತರಬೇತಿ ತರಗತಿಯನ್ನು ಉದ್ಘಾಟಿಸಲಾಯಿತು. ಶಾಲಾ ಮಖ್ಯೋಪಾಧ್ಯಾಯರು ಯೋಗದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಯೋಗ ಶಿಕ್ಷಕಿ ಅನಿತಾ ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ನೀಡಿದರು.

ಕಾರ್ಕಳ ಹಿರಿಯ ನಾಗರೀಕ ವೇದಿಕೆ

ಕಾರ್ಕಳ ಹಿರಿಯ ನಾಗರೀಕ ವೇದಿಕೆ ವತಿಯಿಂದ ಪೆರ್ವಾಜೆ ಸುಂದರ ಪುರಾಣಿಕ ಸರಕಾರಿ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!