Tuesday, July 5, 2022
spot_img
Homeಕ್ರೈಂಜೈಲಿನಲ್ಲಿದ್ದ ಮಗನಿಗೆ ಡ್ರಗ್ಸ್‌ ನೀಡಲು ಯತ್ನಿಸಿದ ತಾಯಿ ಸೆರೆ

ಜೈಲಿನಲ್ಲಿದ್ದ ಮಗನಿಗೆ ಡ್ರಗ್ಸ್‌ ನೀಡಲು ಯತ್ನಿಸಿದ ತಾಯಿ ಸೆರೆ

ಬೆಂಗಳೂರು:ತಾಯಿಯೊಬ್ಬಳು ಜೈಲಿನಲ್ಲಿರುವ ಮಗನಿಗೆ ಡ್ರಗ್ಸ್‌ ನೀಡಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡುವ ನೆಪದಲ್ಲಿ ಹ್ಯಾಶಿಷ್ ಆಯಿಲ್ ನೀಡಲು ಯತ್ನಿಸಿದ ಪರ್ವೀನ್ ತಾಜ್ ಎಂಬ ಮಹಿಳೆಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಈಕೆಯ ಮಗ ಮೊಹಮ್ಮದ್ ಬಿಲಾಲ್ ಎಂಬಾತ ದರೋಡೆ ಸೇರಿದಂತೆ 11 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕೋಣನಕುಂಟೆ ಪೊಲೀಸರು ಬಿಲಾನ್ ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು. ತಾಯಿ-ಮಗ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ದರು‌. ಮಗನನ್ನ ನೋಡಲು ಆಗಾಗ ಪರ್ವೀನ್ ಜೈಲಿಗೆ ಬರುತ್ತಿದ್ದಳು. ಜೂನ್ 13ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಈಕೆ ಮಗನಿಗೆ ಬಟ್ಟೆ ಕೊಡುವ ನೆಪದಲ್ಲಿ ಊಟದ ಬಾಕ್ಸ್ ನಲ್ಲಿ 5 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್ ತಂದಿದ್ದಳು.
ಜೈಲು ಸಿಬ್ಬಂದಿ ಈಕೆಯನ್ನು ಪರಿಶೀಲಿಸಿದ ವೇಳೆ ಬಟ್ಟೆಯ ಜೊತೆಯಲ್ಲಿ ಮಾದಕ ವಸ್ತು ಪತ್ತೆಯಾಗಿತ್ತು. ತಕ್ಷಣ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ತಾಯಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ಮೇಲೆ ಕೇಸ್ ದಾಖಲಿಸಿರುವ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ನನಗೆ ಯಾರೋ ಪೋನ್ ಮಾಡಿ ಜೈಲಿನಲ್ಲಿರುವ ವ್ಯಕ್ತಿಗೆ ಮಗನ ಮುಖಾಂತರ ಬಟ್ಟೆ‌ಯ ಬ್ಯಾಗ್ ನೀಡಬೇಕೆಂದು ಎಂದು ಪೋನ್‌ ಮಾಡಿದ್ದರು.‌ ಇದರಂತೆ ನಾನು ಬ್ಯಾಗ್ ನೀಡಲು ಒಪ್ಪಿಕೊಂಡೆ. ಬ್ಯಾಗ್‌ನಲ್ಲಿ ಡ್ರಗ್ಸ್ ಇರುವುದು ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.‌‌ ಈಕೆ‌ ಹೇಳಿಕೆ ಮೇರೆಗೆ ಫೋನ್‌ ಬಂದಿದ್ದ ಮೊಬೈಲ್‌‌ ನಂಬರ್ ಆಧರಿಸಿ ಪೊಲೀಸರು ತನಿಖೆ‌‌ ನಡೆಸುತ್ತಿದ್ದಾರೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!