Tuesday, July 5, 2022
spot_img
Homeಸ್ಥಳೀಯ ಸುದ್ದಿಅಗ್ನಿಪಥ್ ಯೋಜನೆ ಭಾರತದ ಭವಿಷ್ಯಕ್ಕೆ ಭದ್ರ ಅಡಿಪಾಯ - ಹರೀಶ್ ಶೆಣೈ

ಅಗ್ನಿಪಥ್ ಯೋಜನೆ ಭಾರತದ ಭವಿಷ್ಯಕ್ಕೆ ಭದ್ರ ಅಡಿಪಾಯ – ಹರೀಶ್ ಶೆಣೈ

ಕಾರ್ಕಳ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಸೇನೆಯ ಮೂರು ಅಂಗಗಳ ಮುಖ್ಯಸ್ಥರು ಘೋಷಿಸಿರುವ ಅಗ್ನಿಪಥ ಯೋಜನೆಯು ಭಾರತದ ಭವಿಷ್ಯಕ್ಕೆ ಭದ್ರ ಅಡಿಪಾಯವಾಗಲಿದೆ. ವಿಶೇಷವಾಗಿ ವಿದ್ಯಾಭ್ಯಾಸ ಮುಂದುವರೆಸಲಾಗದ ಬಡ ಕುಟುಂಬದ ಯುವಕರಿಗೆ ಈ ಯೋಜನೆಯಿಂದ ಬಹು ಪ್ರಯೋಜನವಾಗಲಿದೆ ಎಂದು ಕಾರ್ಕಳ ಬಿಜೆಪಿ ವಕ್ತಾರ ಕೆ.ಎಸ್. ಹರೀಶ್‌ ಶೆಣೈ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.
ಕೇಂದ್ರ ಸರಕಾರ 17 ವರ್ಷದ ಯುವಕರಿಗೆ ಅಗ್ನಿವೀರರಾಗಿ ಸೇವೆ ಸಲ್ಲಿಸುವಂತಹ ಅವಕಾಶ ಕಲ್ಪಿಸಿದ್ದು, ಇದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸದೃಢವಾಗಿರಲಿದೆ. ಸೈನ್ಯದ ವಾತಾವರಣದಲ್ಲಿ ಬೆಳೆಸಿಕೊಂಡ ರಾಷ್ಟ್ರಪ್ರೇಮ ಅವರ ಮನೆಯ ಸದಸ್ಯರನ್ನು ಹಾಗೂ ಮಿತ್ರರನ್ನು ಕೂಡ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು. 4 ವರ್ಷಗಳ ಸೇನೆಯ ಉದ್ಯೋಗದ ಬಳಿಕ ಅವರನ್ನು ಪೋಲಿಸ್ ಪಡೆಗಳಿಗೆ, ಖಾಸಗಿ ವಲಯದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವ ಅವಕಾಶವಿರುವುದರಿಂದ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಲಿದೆ ಎಂದವರು ತಿಳಿಸಿದರು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!