Tuesday, July 5, 2022
spot_img
Homeಸ್ಥಳೀಯ ಸುದ್ದಿಕ್ರಿಯೇಟಿವ್‌ ಕಾಲೇಜಿನ ಚೊಚ್ಚಲ ಫಲಿತಾಂಶ - ಶೇ. 100 ಸಾಧನೆ

ಕ್ರಿಯೇಟಿವ್‌ ಕಾಲೇಜಿನ ಚೊಚ್ಚಲ ಫಲಿತಾಂಶ – ಶೇ. 100 ಸಾಧನೆ

ಕಾರ್ಕಳ : ಹಿರ್ಗಾನದಲ್ಲಿರುವ ಕ್ರಿಯೇಟಿವ್‌ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ರಿಶೆಲ್‌ ಜೆಸ್ಸಿಕಾ ಸಲ್ಡಾನ ಮತ್ತು ರಿಧಿ ಎಸ್‌. ಕುಂಟಾಡಿ 591 ಅಂಕ ಗಳಿಸಿ ರಾಜ್ಯಕ್ಕೆ 8 ನೇ ರ‍್ಯಾಂಕ್‌, ಸಹನಾ ಕಾಟೇನಹಳ್ಳಿ 590 ಅಂಕದೊಂದಿಗೆ 9 ನೇ ರ‍್ಯಾಂಕ್‌ ಗಳಿಸಿದ್ದಾರೆ. ವಾಣಿಜ್ಯ ವಿಭಾಗದ ಅಶ್ವಿತಾ 590 ಅಂಕ ಪಡೆದು ರಾಜ್ಯಕ್ಕೆ 7ನೇ ರ‍್ಯಾಂಕ್‌, ಅನಘ್ ಜಿ. ಗೌಡ 589 ಅಂಕ ಪಡೆದು ರಾಜ್ಯಕ್ಕೆ 8 ನೇ ಸ್ಥಾನ, ಸುಮಾ ಮತ್ತು ಅನನ್ಯ ಹೆಗಡೆ 588 ಅಂಕಗಳನ್ನು ಪಡೆದು ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾರೆ. ಒಟ್ಟು 112 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 61 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಗಣಿತಶಾಸ್ತ್ರದಲ್ಲಿ 39, ಭೌತಶಾಸ್ತ್ರದಲ್ಲಿ 10, ರಸಾಯನಶಾಸ್ತ್ರದಲ್ಲಿ 10, ಜೀವಶಾಸ್ತ್ರದಲ್ಲಿ 07, ಕನ್ನಡದಲ್ಲಿ 01, ಸಂಸ್ಕೃತದಲ್ಲಿ 03, ವ್ಯವಹಾರ ಅಧ್ಯಯನದಲ್ಲಿ 05, ಲೆಕ್ಕಶಾಸ್ತ್ರದಲ್ಲಿ 11, ಗಣಕ ವಿಜ್ಞಾನದಲ್ಲಿ 30 ವಿದ್ಯಾರ್ಥಿಗಳು ವಿಷಯವಾರು ಪೂರ್ಣಾಂಕವನ್ನು ಪಡೆದಿದ್ದಾರೆ.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!