ಬೆಂಗಳೂರು : ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಶೇ.61.88 ತೇರ್ಗಡೆ ದಾಖಲಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಂದು ಫಲಿತಾಂಶ ಪ್ರಕಟಿಸಿದ್ದು, ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲ್ಗೈ ಸಾಧಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 5,99,794 ವಿದ್ಯಾರ್ಥಿಗಳಲ್ಲಿ 4,022,697 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪುನರಾವರ್ತಿತ 61,838 ವಿದ್ಯಾರ್ಥಿಗಳಲ್ಲಿ 14,403 ಮಂದಿ ತೇರ್ಗಡೆಯಾಗಿದ್ದಾರೆ. 21,931 ಖಾಸಗಿ ವಿದ್ಯಾರ್ಥಿಗಳ ಪೈಕಿ 5866 ಮಂದಿ ಪಾಸಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಶೇ. 88.02 ಫಲಿತಾಂಶದೊಂದಿಗೆ ಜಿಲ್ಲಾವಾರು ಫಲಿತಾಂಶದಲ್ಲಿ ಅಗ್ರಸ್ಥಾನದಲ್ಲಿದೆ. ಉಡುಪಿ ಶೇ.86.38 ಫಲಿತಾಂಶ ದಾಖಲಿಸಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹೀಗೆ ಮೊದಲ ಎರಡು ಅಗ್ರಸ್ಥಾನಗಳು ಈ ಸಲ ಕರಾವಳಿ ಜಿಲ್ಲೆ ಪಾಲಾಗಿವೆ. ಶೇ.49.31 ಫಲಿತಾಂಶ ದಾಖಲಿಸಿರುವ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ. ಗಣಿತದಲ್ಲಿ 14210 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.
ಪಿಯುಸಿ ಫಲಿತಾಂಶ ಪ್ರಕಟ : ದ.ಕ. – ಪ್ರಥಮ, ಉಡುಪಿ – ದ್ವಿತೀಯ
Recent Comments
ಕಗ್ಗದ ಸಂದೇಶ
on