ಹೈದರಾಬಾದ್ : ಪ್ರಧಾನಿ ಮೋದಿ ಮೇ.26 ರಂದು ಭಾರತೀಯ ವಾಣಿಜ್ಯ ಸಂಸ್ಥೆಯ 20ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ತೆಲಂಗಾಣ ಸಿಎಂ ಶಿಷ್ಟಾಚಾರ ಉಲ್ಲಂಘಿಸಿ ಬೆಂಗಳೂರಿಗೆ ತೆರಳಿದ್ದಾರೆ. ಪ್ರಧಾನಿ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೆ ಅಲ್ಲಿನ ಮುಖ್ಯಮಂತ್ರಿ ಸ್ವಾಗತಿಸಬೇಕಾದದ್ದು ಶಿಷ್ಟಾಚಾರ. ಆದರೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ 2024ರ ಲೋಕಸಭಾ ಚುನಾವಣೆಯನ್ನು ಗಮನಲ್ಲಿರಿಸಿಕೊಂಡು ರಾಜಕೀಯ ಚಟುಚಟಿಕೆ ಚುರುಕುಗೊಳಿಸಿ ಬಿಜೆಪಿ ವಿರುದ್ದ ಕಾಂಗ್ರೆಸ್ಸೇತರ ಪಕ್ಷಗಳನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿ ಮೋದಿ ಅವರ ಭೇಟಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಫೆ. 5 ರಂದು ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಅನಾವರಣಗೊಳಿಸಲೆಂದು ಪ್ರಧಾನಿ ಹೈದರಾಬಾದ್ಗೆ ಬಂದಿದ್ದರೂ ಅಂದು ಸಹ ಅವರನ್ನೂ ಸಿಎಂ ಭೇಟಿಯಾಗಿರಲಿಲ್ಲ.
Recent Comments
ಕಗ್ಗದ ಸಂದೇಶ
on