Sunday, July 3, 2022
spot_img
Homeಸ್ಥಳೀಯ ಸುದ್ದಿನಾರಾಯಣ ಗುರುಗಳ ಪಾಠ ಕೈ ಬಿಟ್ಟದ್ದು ಮಹಾಪರಾಧ - ಬಿಪಿನ್‌ಚಂದ್ರ ಪಾಲ್‌

ನಾರಾಯಣ ಗುರುಗಳ ಪಾಠ ಕೈ ಬಿಟ್ಟದ್ದು ಮಹಾಪರಾಧ – ಬಿಪಿನ್‌ಚಂದ್ರ ಪಾಲ್‌

ಕಾರ್ಕಳ : ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಎಂಬ ಅಧ್ಯಾಯವನ್ನು ಕೈ ಬಿಟ್ಟು ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಯೋಗಂ ಮತ್ತು ಪೆರಿಯಾರ್ ಎಂಬ ಪಾಠಕ್ಕೆ ಕತ್ತರಿ ಹಾಕುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಕ್ರಮ ಶಿಕ್ಷಣ ಕ್ಷೇತ್ರಕ್ಕೆ ಮಾಡಿದ ಮಹಾಪಮಾನ. ಸರಕಾರ ಈ ಬಗ್ಗೆ ಪುನರ್ವಿಮರ್ಶೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ಸರಕಾರವನ್ನು ಒತ್ತಾಯಿಸಿದೆ.

ಒಂದೇ ಜಾತಿ ಮತ ದೇವರು ಎಂಬ ಸಿದ್ಧಾಂತದೊಂದಿಗೆ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ದಾರ್ಶನಿಕ ಪುರುಷ ಶ್ರೀ ನಾರಾಯಣ ಗುರು ಮತ್ತು ಜನಾಂಗೀಯ ಅಸಮಾನತೆಯ ವಿರುದ್ಧ ಧ್ವನಿಯೆತ್ತಿ ಸಮಾನತೆಯ ಸಿದ್ಧಾಂತ ಸಾರಿದ ಪೆರಿಯಾರ್‌ ಪಾಠವನ್ನು ಬದಿಗಿಟ್ಟು ಆರ್‌ ಎಸ್ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣದ ವಿಷಯವನ್ನು ಪಾಠವನ್ನಾಗಿ ಸೇರಿಸುವ ಔಚಿತ್ಯವಾದರೂ ಏನು ? ಕಾಂಗ್ರೆಸ್ ಸರಕಾರದ ಈ ನಡೆಯ ಹಿಂದೆ ಸಾಮಾಜಿಕ ನ್ಯಾಯಕ್ಕೆ ಧ್ವನಿಯಾದವರ ಧ್ವನಿಯಡಗಿಸುವ ಮೂಲಭೂತವಾದಿ ಚಿಂತನೆಯ ಪಿತೂರಿಯಡಗಿದೆ ಎಂದು ಹೇಳಿದೆ.
ದೇಶದ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾದ ಶಿಕ್ಷಣ ತಾರತಮ್ಯ ರಹಿತವಾಗಿರಬೇಕೇ ಹೊರತು ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಯ ಸೈದ್ದಾಂತೀಕತೆಯ ಹಿತಾಸಕ್ತಿಯನ್ನು ಅವಲಂಬಿತವಾಗಬಾರದು. ಆ ನೆಲೆಯಲ್ಲಿ ಸರಕಾರ ಕೂಡಲೇ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಯನ್ನು ವಜಾಗೊಳಿಸಬೇಕು. ಶ್ರೀ ನಾರಾಯಣಗುರು ಹಾಗೂ ಪೆರಿಯಾರ್ ವಿಚಾರಧಾರೆಗಳ ಪಾಠವನ್ನು ಪಠ್ಯ ಪುಸ್ತಕದಲ್ಲಿ ಮರುಸೇರಿಸಿ ಸರಕಾರ ತನ್ನ ಸಾಮಾಜಿಕ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿಕೆ ತಿಳಿಸಿದ್ದಾರೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!