ಕಾರ್ಕಳ : ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದ ಪೆರ್ವಾಜೆ ಪ್ರೌಢಶಾಲೆಯ ವಿದ್ಯಾರ್ಥಿ ಅನಿಕೇತ್ ಶೆಟ್ಟಿ ಅವರಿಗೆ ಹಿರಿಯಂಗಡಿಯ ಚಂದ್ರನ್ ಅವರು ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು. ಮೇ 20ರ ಸಂಜೆ ಎಸ್ಸೆಸೆಲ್ಸಿ ಕಾರ್ಕಳದ ಟಾಪರ್ ಜೊತೆಗೆ ನ್ಯೂಸ್ ಕಾರ್ಕಳ ವಿಶೇಷ ಸಂದರ್ಶನ ನಡೆಸಿತ್ತು. ನೇರ ಪ್ರಸಾರ ವೀಕ್ಷಿಸುತ್ತಿದ್ದ ಲಂಡನ್ನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಹಿರಿಯಂಗಡಿಯ ಸೀಮಾ ಅವರು ತಂದೆಗೆ ಕರೆ ಮಾಡಿ, ಅನಿಕೇತ್ಗೆ ನಗದು ನೀಡಿ ಪುರಸ್ಕರಿಸುವಂತೆ ತಿಳಿಸಿದ್ದು, ಅದರಂತೆ ಅವರ ತಂದೆ ಮತ್ತು ತಾಯಿ ನೇರ ಪ್ರಸಾರ ಕಾರ್ಯಕ್ರಮ ಮುಗಿಯುವುದಕ್ಕಿಂತ ಮುಂಚೆಯೇ ನ್ಯೂಸ್ ಕಾರ್ಕಳ ಕಚೇರಿ ಆಗಮಿಸಿ, ಅನಿಕೇತ್ ಅವರಿಗೆ ಸನ್ಮಾನಿಸಿದರು.
Recent Comments
ಕಗ್ಗದ ಸಂದೇಶ
on